ಹಾವೇರಿ:ಕೊರೊನಾ ಸೋಂಕು ಹರಡುವಿಕೆ ತಡೆಯಲು ಹಾವೇರಿ ಜಿಲ್ಲಾಡಳಿತಕ್ಕೆ ಅಬಕಾರಿ ಇಲಾಖೆ 250 ಲೀಟರ್ ಸ್ಯಾನಿಟೈಸರ್ ನೀಡಿದೆ.
ಹಾವೇರಿ ಜಿಲ್ಲಾಡಳಿತಕ್ಕೆ ಸ್ಯಾನಿಟೈಸರ್ ಹಸ್ತಾಂತರಿಸಿದ ಅಬಕಾರಿ ಇಲಾಖೆ - ಹಾವೇರಿ ಸುದ್ದಿ
ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿಗೆ, ಅಬಕಾರಿ ಡಿಸಿ ಡಾ.ಮಹಾದೇವಿ ಬಾಯಿ ಕೊರೊನಾ ಸೋಂಕು ಹರಡುವಿಕೆ ತಡೆಯಲು 250 ಲೀಟರ್ ಸ್ಯಾನಿಟೈಸರ್ ಕ್ಯಾನ್ ಹಸ್ತಾಂತರಿಸಿದ್ದಾರೆ.
![ಹಾವೇರಿ ಜಿಲ್ಲಾಡಳಿತಕ್ಕೆ ಸ್ಯಾನಿಟೈಸರ್ ಹಸ್ತಾಂತರಿಸಿದ ಅಬಕಾರಿ ಇಲಾಖೆ Excise Department Given sanitizer for Haveri District administration](https://etvbharatimages.akamaized.net/etvbharat/prod-images/768-512-6902754-185-6902754-1587605809134.jpg)
ಹಾವೇರಿ ಜಿಲ್ಲಾಡಳಿತಕ್ಕೆ ಸ್ಯಾನಿಟೈಸರ್ ಹಸ್ತಾಂತರಿಸಿದ ಅಬಕಾರಿ ಇಲಾಖೆ
ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿಗೆ ಅಬಕಾರಿ ಡಿಸಿ ಡಾ.ಮಹಾದೇವಿ ಬಾಯಿ ಸ್ಯಾನಿಟೈಸರ್ ಕ್ಯಾನ್ ಹಸ್ತಾಂತರಿಸಿದರು. ಸ್ಯಾನಿಟೈಸರ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕೊರೊನಾ ತಡೆಗಟ್ಟುವಲ್ಲಿ ಸ್ಯಾನಿಟೈಸರ್ ಪಾತ್ರ ಪ್ರಮುಖವಾಗಿದೆ. ಇದರಿಂದ ಕೊರೊನಾ ಚೈನ್ ಮುಂದುವರಿಕೆಯನ್ನ ತಡೆಗಟ್ಟಬಹುದು ಎಂದು ತಿಳಿಸಿದರು.