ರಾಣೆಬೆನ್ನೂರು:ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು 17 ಶಾಸಕರನ್ನು ಅನರ್ಹ ಮಾಡಲಾಗಿದೆ ಹೊರತು ನಾನು ಮಾಡಿದ್ದಲ್ಲ ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಹೇಳಿದರು.
ಅತೃಪ್ತರನ್ನ ಅನರ್ಹ ಮಾಡಿರೋದು ಸಂವಿಧಾನ ಹೊರತು ನಾನಲ್ಲ.. ಮಾಜಿ ಸ್ಪೀಕರ್ ರಮೇಶ್‌ಕುಮಾರ್ - ಅನರ್ಹ ಶಾಸಕರು
ರಾಜ್ಯದಲ್ಲಿ ಅನರ್ಹರಾದ 17 ಶಾಸಕರನ್ನು ಮತ್ತೆ ವಿಧಾನಸೌಧದ ಬಾಗಿಲಿಗೆ ಕಾಲಿಡದಂತೆ ಅವರನ್ನು ಜನರು ತಿರಸ್ಕಾರ ಮಾಡಬೇಕು ಎಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್‌ಕುಮಾರ್ ಕರೆ ನೀಡಿದರು.
![ಅತೃಪ್ತರನ್ನ ಅನರ್ಹ ಮಾಡಿರೋದು ಸಂವಿಧಾನ ಹೊರತು ನಾನಲ್ಲ.. ಮಾಜಿ ಸ್ಪೀಕರ್ ರಮೇಶ್‌ಕುಮಾರ್](https://etvbharatimages.akamaized.net/etvbharat/prod-images/768-512-5102614-thumbnail-3x2-forijpg.jpg)
ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲೂಕಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಕೆ ಬಿ ಕೋಳಿವಾಡರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಅಕ್ಷರ ಜ್ಞಾನವಿಲ್ಲದ ಆರ್.ಶಂಕರ್ ಎಂಬ ವ್ಯಕ್ತಿಯನ್ನು ರಾಣೆಬೆನ್ನೂರು ಕ್ಷೇತ್ರದಿಂದ ಹೇಗೆ ಆಯ್ಕೆ ಮಾಡಿ ಕಳುಹಿಸಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಅನರ್ಹರಾದ 17 ಶಾಸಕರನ್ನು ಮತ್ತೆ ವಿಧಾನಸೌಧದ ಬಾಗಿಲಿಗೆ ಕಾಲಿಡದಂತೆ ಅವರನ್ನು ಜನರು ತಿರಸ್ಕಾರ ಮಾಡಬೇಕು ಎಂದರು.
ಈ ಕ್ಷೇತ್ರದ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾದ ಆರ್.ಶಂಕರ ಕಾಂಗ್ರೆಸ್ ಪಕ್ಷ ಸೇರಿ ನಂತರ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಇವರ ಪಕ್ಷ ವಿರೋಧಿ ಚಟುವಟಿಕೆ ಕುರಿತು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ನನಗೆ ದೂರ ನೀಡಿದ್ದರು.ಈ ದೂರಿನ ಅನ್ವಯ ಆರ್.ಶಂಕರ್ ಅವರನ್ನು ಅನರ್ಹ ಮಾಡಲಾಗಿತ್ತು. ಸುಪ್ರೀಂಕೋರ್ಟ್ ಕೂಡ ಅವರನ್ನು ಜೀವನದಲ್ಲಿ ಅನರ್ಹರರಾಗಿ ಉಳಿಯುವಂತೆ ಮಾಡಿದೆ ಎಂದರು.