ರಾಣೆಬೆನ್ನೂರು: ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನನ್ನನ್ನು ಎಂಎಲ್ಸಿ ಮಾಡುತ್ತಾರೆ. ನಾನು ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.
ರಾಣೆಬೆನ್ನೂರಿನ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ನಡೆದ ಶಾಸಕರ ಸಭೆಯಲ್ಲಿ ಭಾಗವಹಿಸಿಲ್ಲ. ಬೆಳಿಗ್ಗೆಯೇ ನಾನು ಬೆಂಗಳೂರು ಬಿಟ್ಟು ರಾಣೆಬೆನ್ನೂರಿಗೆ ಬಂದಿದ್ದೇನೆ. ಈಗ ಎಂಎಲ್ಸಿ ಚುನಾವಣೆ ಬಂದಿದ್ದು, ಅವರವರ ಡಿಮ್ಯಾಂಡ್ ಮತ್ತು ಹಕ್ಕನ್ನ ಕೇಳ್ತಿದ್ದಾರೆ. ಸಿಎಂ ಇವೆಲ್ಲವನ್ನೂ ನಿಭಾಯಿಸ್ತಾರೆ, ಸರಿದೂಗಿಸ್ತಾರೆ ಎಂಬ ಭರವಸೆ ಇದೆ ಎಂದರು.