ಕರ್ನಾಟಕ

karnataka

ETV Bharat / state

ಹಾವೇರಿ ನಗರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ: ರೈತರಿಗೆ ಅನುಕೂಲ - Haveri

ಹಾವೇರಿ ಹೊರವಲಯದ ಗೌರಾಪುರ ಬಳಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಹಾವೇರಿ ನಗರಸಭೆ ನಿರ್ಮಿಸಿದೆ.

Establishment of Solid Waste Disposal Unit
ಘನತ್ಯಾಜ್ಯ ವಿಲೇವಾರಿ ಘಟಕ

By

Published : Jun 20, 2021, 7:10 AM IST

ಹಾವೇರಿ:ನಗರದಲ್ಲಿ ಪ್ರತಿನಿತ್ಯ 33 ಟನ್​​ಗಿಂತ ಅಧಿಕ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ 13 ಟನ್ ಹಸಿ ಕಸವಾಗಿದ್ದರೆ, 20 ಟನ್ ಒಣ ಕಸ ಉತ್ಪಾದನೆಯಾಗುತ್ತದೆ. ಇದರ ಸಮರ್ಪಕ ನಿರ್ವಹಣೆಗಾಗಿ ಹಾವೇರಿ ಹೊರವಲಯದ ಗೌರಾಪುರ ಬಳಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಹಾವೇರಿ ನಗರಸಭೆ ನಿರ್ಮಿಸಿದೆ.

ಗೌರಾಪುರ ಬಳಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ..

ಕಸ ನಿರ್ವಹಣೆ ಹೀಗೆ..

ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಈ ಘಟಕಕ್ಕೆ ಹಾವೇರಿ ನಗರದಿಂದ ಕಸ ಬರುತ್ತಿದ್ದಂತೆ ಹಸಿ ಮತ್ತು ಒಣ ಕಸ ಎಂದು ವಿಂಗಡಣೆ ಮಾಡಲಾಗುತ್ತದೆ. ನಂತರ ಕಸದಲ್ಲಿ ಕಬ್ಬಿಣ, ಪ್ಲಾಸ್ಟಿಕ್, ಗ್ಲಾಸ್ ಸೇರಿದಂತೆ ಹಲವು ವಿಭಾಗಗಳಾಗಿ ವಿಂಗಡಿಸಿ ಕಸವನ್ನು ಘಟಕದಲ್ಲಿ ನಿರ್ಮಿಸಲಾಗಿರುವ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಘಟಕದಲ್ಲಿ ಹಾಕಲಾಗುತ್ತದೆ. ಇದರಲ್ಲಿ ಹಲವು ದಿನಗಳ ನಂತರ ಎರೆಹುಳು ಗೊಬ್ಬರ ಸಿದ್ದಗೊಳ್ಳುತ್ತದೆ.

ರೈತರಿಗೆ ಪ್ಯಾಕೆಟ್‌ಗಳಲ್ಲಿ ಗೊಬ್ಬರ ವಿತರಣೆ

ನಗರಸಭೆ ವಿನರೋ ಕಾಂಪೋಸ್ಟ್ ಗೊಬ್ಬರ ಸಹ ತಯಾರಿಸುತ್ತದೆ. ಇದಕ್ಕಾಗಿ ಘಟಕದಲ್ಲಿ 10 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಪ್ರತಿನಿತ್ಯ ಎರಡು ಟನ್ ಗೊಬ್ಬರವನ್ನ ತಯಾರಿಸಲಾಗುತ್ತದೆ. ಅದನ್ನು 5 ಕೆಜಿ ಪ್ಯಾಕೆಟ್‌ನಿಂದ ಹಿಡಿದು 50 ಕೆಜಿ ಪ್ಯಾಕೆಟ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಈ ರೀತಿ ಪ್ಯಾಕ್ ಮಾಡಿದ ಗೊಬ್ಬರವನ್ನು ರೈತರಿಗೆ ಕೆಜಿಗೆ ಮೂರು ರೂ.ನಂತೆ ಮಾರಲಾಗುತ್ತದೆ.

ಹಲವು ರೈತರು ಈ ಗೊಬ್ಬರಕ್ಕಾಗಿ ಈಗಾಗಲೇ ಮುಗಿಬಿದ್ದಿದ್ದಾರೆ. ಗೊಬ್ಬರದಿಂದ ಉತ್ತಮ ಇಳುವರಿ ಕಂಡ ರೈತರು ಈಗಾಗಲೇ ಮುಂಗಡ ಕಾಯ್ದಿರಿಸಿದ್ದಾರೆ. ಹಾವೇರಿ ನಗರಸಭೆ ಇದನ್ನ ಹೆಚ್ಚಿನ ದರ್ಜಿಗೆ ಏರಿಸಲು 75 ಲಕ್ಷ ರೂ. ಯೋಜನೆ ರೂಪಿಸಿದೆ. ಈ ಘಟಕ ಆರಂಭವಾದರೆ ದಿನಕ್ಕೆ 10 ಟನ್‌ಗೂ ಅಧಿಕ ಗೊಬ್ಬರ ಉತ್ಪಾದನೆಯಾಗಲಿದೆ.

ಇದಲ್ಲದೆ ಹಾವೇರಿ ನಗರಸಭೆ ಆವರಣದಲ್ಲಿ ಎರೆಹುಳು ಗೊಬ್ಬರದ ವಿತರಣೆಗೆ ಪ್ರತ್ಯೇಕ ವಿಭಾಗ ತೆಗೆಯುವ ಚಿಂತನೆಯಲ್ಲಿದೆ. ನಗರಸಭೆಯ ಈ ಕಾರ್ಯ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details