ರಾಣೆಬೆನ್ನೂರು:ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿ ಬಹಳ ಕುತೂಹಲ ಮೂಡಿಸಿದೆ.
ಎಪಿಎಂಸಿ ಗದ್ದುಗೆಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್ ಒಟ್ಟು 17 ಸ್ಥಾನಗಳನ್ನು ಹೊಂದಿರುವ ಎಪಿಎಂಸಿ ಅಧ್ಯಕ್ಷ ಗದ್ದುಗೆಗಾಗಿ ಈಗಾಗಲೇ ಎರಡು ಪಕ್ಷದಲ್ಲಿ ತೀವ್ರ ಪೈಪೋಟಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿರುವ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯನ್ನು ಹೇಗಾದರೂ ಮಾಡಿ ಬಿಜೆಪಿ ತೆಕ್ಕೆಗೆ ತರಲು ಬಿಜೆಪಿ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.
ಎಪಿಎಂಸಿ ಗದ್ದುಗೆಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್ ಆದರೆ ಕಾಂಗ್ರೆಸ್ ಪಕ್ಷವು 9 ಸದಸ್ಯರನ್ನು ಹೊಂದಿದ್ದು, ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಬಿಜೆಪಿ ಪಕ್ಷ 5 ಸ್ಥಾನ ಹೊಂದಿದ್ದು, ಸರ್ಕಾರದಿಂದ ಆಯ್ಕೆಯಾದ ನಾಮನಿರ್ದೇಶಿತ 3 ಸದಸ್ಯರು ಸೇರಿದರೆ 8 ಸದಸ್ಯರಾಗುತ್ತಾರೆ.
ಒಟ್ಟು 17 ಸದಸ್ಯರ ಪೈಕಿ ಅಧ್ಯಕ್ಷ ಗಾದಿಗೆ ಏರಲು 9 ಸದಸ್ಯರ ಅವಶ್ಯಕತೆ ಇದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಆ ಸ್ಥಾನಗಳು ಯಾರ ಪಾಲಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.