ಹಾನಗಲ್ :ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು ಪ್ರವಾಸಿ ಮಂದಿರದಲ್ಲಿ ಜರುಗಿತು.
ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..
ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಸಂಕಷ್ಟಗಳನ್ನು ಆಲಿಸಿ ಸಂಪೂರ್ಣ ಬಗೆಹರಿಸುವುದು ಮತ್ತು ಉತ್ತಮ ದರ್ಜೆಯ ಕೆಲಸಗಳನ್ನು ನಿರ್ಮಿಸಿ ಸಮಾಜಕ್ಕೆ ಉತ್ತಮ ಕೆಲಸದ ಕೊಡುಗೆ ನೀಡಲು ನಾವೆಲ್ಲರೂ ಒಂದಾಗಬೇಕು..
ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಬೆಟಗೇರಿ, ಗೌರವಾಧ್ಯಕ್ಷರಾಗಿ ವಿರುಪಾಕ್ಷಪ್ಪ ತಳವಾರ, ಮಹದೇವ ವಡ್ಡರ, ಉಪಾಧ್ಯಕ್ಷರಾಗಿ ಜಯಂತ ಲಮಾಣಿ, ಲಕ್ಷ್ಮಣ ತಳವಾರ, ಕೃಷ್ಣ ತಳವಾರ, ಗುತ್ತೆಪ್ಪ ಹರಿಜನ, ಕಾರ್ಯದರ್ಶಿಯಾಗಿ ರಾಕೇಶ್ ವಾಲಿಕಾರ ಆಯ್ಕೆಯಾದರು.
ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಸಂಕಷ್ಟಗಳನ್ನು ಆಲಿಸಿ ಸಂಪೂರ್ಣ ಬಗೆಹರಿಸುವುದು ಮತ್ತು ಉತ್ತಮ ದರ್ಜೆಯ ಕೆಲಸಗಳನ್ನು ನಿರ್ಮಿಸಿ ಸಮಾಜಕ್ಕೆ ಉತ್ತಮ ಕೆಲಸದ ಕೊಡುಗೆ ನೀಡಲು ನಾವೆಲ್ಲರೂ ಒಂದಾಗಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ಬೆಟೆಗೇರಿ ತಿಳಿಸಿದರು.