ಹಾವೇರಿ :ನಿರಂತರ ಮಳೆ ಹಾಗೂ ವರದಾ ನದಿ ನೀರಿನಿಂದ ಹಾನಿಗೊಳಗಾಗಿರುವ ತಾಲೂಕಿನ ಕರಜಗಿ ಗ್ರಾಮಕ್ಕೆ ಚಿತ್ರದುರ್ಗ ಮುರುಘಾ ಮಠದಡಾ.ಶಿವಮೂರ್ತಿ ಶರಣರು ಭೇಟಿ ನೀಡಿದರು.
ಸಂತ್ರಸ್ತರಿಗೆ ಸಾಂತ್ವನ: ಕರಜಗಿ ಗ್ರಾಮಕ್ಕೆ ಮುರುಘಾ ಶರಣರ ಭೇಟಿ - ಬ್ರಹನ್ಮಠ
ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ವರದಾ ನದಿ ನೀರಿನಿಂದ ಹಾನಿಗೊಳಗಾಗಿರುವ ತಾಲೂಕಿನ ಕರಜಗಿ ಗ್ರಾಮಕ್ಕೆ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಭೇಟಿ ನೀಡಿ ಮಠದ ವತಿಯಿಂದ ಸಂತ್ರಸ್ತರಿಗೆ ಹಾಸಿಗೆ, ಹೊದಿಕೆ, ಬಿಸ್ಕೆಟ್, ಸೋಪು ಸೇರಿದಂತೆ ಅಗತ್ಯ ವಸ್ತುಗಳನ್ನ ವಿತರಿಸಿದರು.
ಮಳೆ ಮತ್ತು ನದಿ ನೀರಿನಿಂದ ಮನೆ ಜಮೀನು ಕಳೆದುಕೊಂಡು ಸರ್ಕಾರಿ ಶಾಲೆಯಲ್ಲಿನ ಪರಿಹಾರ ಕೇಂದ್ರ ಸೇರಿರುವ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಠದ ವತಿಯಿಂದ ಸಂತ್ರಸ್ತರಿಗೆ ಹಾಸಿಗೆ, ಹೊದಿಕೆ, ಬಿಸ್ಕಿಟ್, ಸೋಪು ಸೇರಿದಂತೆ ಅಗತ್ಯ ವಸ್ತುಗಳನ್ನ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಕೃತಿ ವಿಕೋಪದಂಥ ಈ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಸಂತ್ರಸ್ತರ ನೆರವಿಗೆ ನಾವೆಲ್ಲಾ ಧಾವಿಸಬೇಕಿದೆ. ಸರ್ಕಾರವೂ ಸಹ ತಾರತಮ್ಯ ಮಾಡದೆ ಸಮಗ್ರ ಕರ್ನಾಟಕವನ್ನು ದೃಷ್ಟಿಯಿಲ್ಲಿಟ್ಟುಕೊಂಡು ಸಂತ್ರಸ್ತರಿಗೆ ಸೂಕ್ತ ಪರಿಹಾರ ಕ್ರಮಗಳನ್ನ ಕೈಗೊಳ್ಳಬೇಕಿದೆ ಎಂದರು.