ಕರ್ನಾಟಕ

karnataka

ETV Bharat / state

'ಅನರ್ಹ ಶಾಸಕ ಆರ್. ಶಂಕರ್​​ಗೆ ಟಿಕೆಟ್​ ಕೊಡೋದು ಬಿಜೆಪಿಗೇ ಕಂಟಕ' - ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ 2018ರ ವಿಧಾನಸಭೆಯ ಪರಾಜಿತ ಬಿಜೆಪಿ‌ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್​​ಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್​​ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗೋದು ಖಚಿತ ಎಂದು ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ 2018ರ ವಿಧಾನಸಭೆಯ ಪರಾಜಿತ ಬಿಜೆಪಿ‌ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.

ಅನರ್ಹ ಶಾಸಕ ಆರ್. ಶಂಕರ್​​ಗೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಬೇಡಿ ಎಂದ ಡಾ. ಬಸವರಾಜ ಕೇಲಗಾರ

By

Published : Sep 24, 2019, 3:11 PM IST

ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್​​ಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಬೇಡಿ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದ್ರೆ ಪಕ್ಷಕ್ಕೆ ನಷ್ಟ ಆಗೋದು ಖಚಿತ ಎಂದು ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ 2018ರ ಪರಾಜಿತ ಬಿಜೆಪಿ‌ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಹೇಳಿದ್ದಾರೆ.

ಅನರ್ಹ ಶಾಸಕ ಆರ್. ಶಂಕರ್​​ಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಬೇಡಿ ಎಂದ ಡಾ. ಬಸವರಾಜ ಕೇಲಗಾರ

ಅನರ್ಹ ಶಾಸಕರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ‌. ಆದ್ರೆ ಅವರದ್ದು ತ್ಯಾಗ, ಬಲಿದಾನ, ಶ್ರಮ, ಹೋರಾಟ ಅನ್ನೋದಕ್ಕೆ ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆಸೆ, ಆಕಾಂಕ್ಷೆ ಇಟ್ಟುಕೊಂಡೇ ಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ. ಎಂಎಲ್​ಸಿ, ಸಚಿವ ಸ್ಥಾನ ಅಥವಾ ನಿಗಮ ಮಂಡಳಿಯಲ್ಲಿ ಅವಕಾಶ ಕೊಡಿ. ಆದ್ರೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡಬೇಡಿ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಅಂತ ಕೇಲಗಾರ ಮನವಿ ಮಾಡಿದ್ದಾರೆ.

ಅಲ್ಲದೇ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಳೆದ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು. ಆಗ 50 ಸಾವಿರ ಮತ ಪಡೆದಿದ್ದೇನೆ. ಹೀಗಾಗಿ ಹೈಕಮಾಂಡ್ ಟಿಕೆಟ್ ಕೊಡೋ ಭರವಸೆ ಇದೆ. ನಾನು ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದಿಲ್ಲ. ಬಿಜೆಪಿ ನಮ್ಮ ಮನೆ. ಅಲ್ಲಿಯೇ ಗಟ್ಟಿಯಾಗಿ ನಿಂತು ಟಿಕೆಟ್ ತಗೋತೀನಿ. ಹೈಕಮಾಂಡ್ ಕೂಡ ಅಳೆದು ತೂಗಿ ನೋಡಿ ಟಿಕೆಟ್ ಕೊಡ್ತಾರೆ ಅಂತ ಡಾ. ಬಸವರಾಜ ಕೇಲಗಾರ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details