ರಾಣೆಬೆನ್ನೂರು: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರಾಣೆಬೆನ್ನೂರು ತಾಲೂಕಿನಿಂದ ಸಂಗ್ರಹವಾದ ಸುಮಾರು 16.47 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಶಾಸಕ ಅರುಣಕುಮಾರ್ ಪೂಜಾರ್ ಸಿಎಂ ಬಿಎಸ್ವೈಗೆ ಹಸ್ತಾಂತರಿಸಿದರು.
ರಾಣೆಬೆನ್ನೂರಲ್ಲಿ ಸಂಗ್ರಹಿಸಿದ್ದ 16 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ದೇಣಿಗೆ - CM's Relief Fund
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಲ್ಲಿ ಸಂಗ್ರಹಿಸಿದ ಅಂದಾಜು 16.47 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಶಾಸಕ ಅರುಣಕುಮಾರ್ ಪೂಜಾರ್ ಹಸ್ತಾಂತರಿಸಿದರು.
ಸಿಎಂ ಪರಿಹಾರ ನಿಧಿಗೆ 16 ಲಕ್ಷ ರೂಪಾಯಿ ದೇಣಿಗೆ
ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದರು.
ನಗರಸಭೆ ಸದಸ್ಯರು, ಬೆಂಬಲಿಗರು, ಇಟ್ಟಿಗೆ ಭಟ್ಟಿ ಮಾಲೀಕರು, ಕಾರ್ಖಾನೆಗಳ ಮಾಲೀಕರು ಹಾಗೂ ವಿವಿಧ ಉದ್ಯಮಿಗಳಿಂದ ಸಂಗ್ರಹಿಸಲಾದ ದೇಣಿಗೆ ಹಣ ಇದಾಗಿದೆ. ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಇದ್ದರು.