ಹಾವೇರಿ:ಶಾಸಕ ಬಿ ಸಿ ಪಾಟೀಲ ಅವರಿಗೆ ಸನ್ಮಾನ ಮಾಡಲು ಬರುವವರಿಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.
ಸನ್ಮಾನ ಬೇಡ.. ಅದೇ ಹಣ ರಾಮ ಮಂದಿರಕ್ಕೆ ದೇಣಿಗೆ ನೀಡಿ.. ಶಾಸಕ ಬಿ ಸಿ ಪಾಟೀಲ - ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣ ಬಿ.ಸಿ ಪಾಟೀಲ ಪೋಸ್ಟ್
ಹಾವೇರಿ ಜಿಲ್ಲೆಯ ಹಿರೇಕೆರೂರು ನೂತನ ಶಾಸಕ ಬಿ ಸಿ ಪಾಟೀಲ ಅವರು ಇದೀಗ ರಾಮ ಮಂದಿರ ಜಪ ಆರಂಭಿಸಿದ್ದಾರೆ. ಸನ್ಮಾನ ಮಾಡಲು ಬಂದವರಿಗೆ ಸನ್ಮಾನ ಬೇಡ, ಅದೇ ಹಣವನ್ನ ರಾಮ ಮಂದಿರಕ್ಕೆ ದೇಣಿಗೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ.
ಶಾಸಕ ಬಿ.ಸಿ ಪಾಟಿಲ್
ಶಾಲು, ಮಾಲೆ ಹಾಗೂ ಉಡುಗೊರೆ ತರೋದರ ಬದಲು ಅದೇ ಹಣವನ್ನ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ದೇಣಿಗೆ ಹಣವನ್ನ ತಾಲೂಕಿನ ಪರವಾಗಿ ರಾಮಮಂದಿರ ನಿರ್ಮಾಣಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.