ರಾಣೆಬೆನ್ನೂರು (ಹಾವೇರಿ): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ಖಂಡಿಸಿ ರಾಣೆಬೆನ್ನೂರಲ್ಲಿ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಣೆಬೆನ್ನೂರು ನಗರದ ಬಸ್ ನಿಲ್ದಾಣ ಮುಂಭಾಗ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ರಸ್ತೆ ತಡೆದು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ರಾಣೆಬೆನ್ನೂರಲ್ಲಿ ಅಭಿಮಾನಿಗಳ ಪ್ರತಿಭಟನೆ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ಡಿಕೆಶಿ ಬೆಳವಣಿಗೆ ಸಹಿಸಲಾಗದೆ ಸಿಬಿಐ ಮೂಲಕ ಅವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಯಾವುದೇ ದಾಳಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಜಗ್ಗುವುದಿಲ್ಲ ಎಂದರು.
ಸದ್ಯ ರಾಜ್ಯದ ಎರಡು ಕಡೆ ಉಪಚುನಾವಣೆ ನಡೆಯುತ್ತಿದ್ದು, ಡಿಕೆಶಿ ಪ್ರಚಾರ, ಅವರ ಕಾರ್ಯತಂತ್ರ ನೋಡಿ ಬಿಜೆಪಿ ಇಂತಹ ಕೆಲಸಕ್ಕೆ ಕೈಹಾಕಿದೆ. ಆದರೆ ಬಿಜೆಪಿ ನೇರ ಹೋರಾಟ ಮಾಡದೆ ಇಂತಹ ಹೀನ ಕೆಲಸಕ್ಕೆ ಕೈಹಾಕಿದೆ ಎಂದರು.