ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಬಸ್‌ಗೆ ಡಿಕೆಶಿ ಕಂಡಕ್ಟರ್, ಸಿದ್ದು ಡ್ರೈವರ್, ಬಸ್​ ಪಂಕ್ಚರ್: ಬೊಮ್ಮಾಯಿ ವ್ಯಂಗ್ಯ - DCM Lakshmana Savadi

ಹಾವೇರಿಯ ಮಾಗಾವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜನಸೇವಕ್ ಸಮಾವೇಶ ನಡೆಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.

dsd
ಬೊಮ್ಮಾಯಿ ವ್ಯಂಗ್ಯ

By

Published : Jan 11, 2021, 8:22 PM IST

ಹಾವೇರಿ: ರಾಜ್ಯ ಕಾಂಗ್ರೆಸ್ ಬಸ್‌ಗೆ ಡಿ.ಕೆ.ಶಿವಕುಮಾರ್ ಕಂಡಕ್ಟರ್, ಸಿದ್ದರಾಮಯ್ಯ ಡ್ರೈವರ್. ಡಿಕೆಶಿ ಬಸ್​​ ಬಿಡು ಅಂದಾಗ ಸಿದ್ದರಾಮಯ್ಯ ಸ್ಟಾಪ್ ಮಾಡುತ್ತಾರೆ. ಡಿಕೆಶಿ ನಿಲ್ಲಿಸು ಅಂದಾಗ ಸಿದ್ದರಾಮಯ್ಯ ಬಸ್ ಚಲಾಯಿಸುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಜನಸೇವಕ್ ಸಮಾವೇಶ

ನಗರದ ಮಗಾವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಬಸ್​ನ ನಾಲ್ಕು ಗಾಲಿಗಳು ಪಂಕ್ಚರ್​ ಆಗಿವೆ. ಸಿದ್ದರಾಮಯ್ಯ ಅಡಳಿತದಲ್ಲಿದ್ದಾಗ ಒಂದು ತರಹ, ಪ್ರತಿಪಕ್ಷದಲ್ಲಿದ್ದಾಗ ಒಂದು ತರಹ ಮಾತನಾಡುತ್ತಾರೆ ಅವರು ವ್ಯಂಗ್ಯವಾಡಿದರು.

ನಂತರ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಗ್ರಾಮ ಪಂಚಾಯಿತಿ ಸದಸ್ಯರ ಕುರಿತು ಮಾತನಾಡಿ, ಗ್ರಾಮ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಿದರೆ ಪಕ್ಷ ನಿಮ್ಮನ್ನು ಗುರುತಿಸುತ್ತೆ. ಮಾದರಿ ಗ್ರಾಮ ಪಂಚಾಯತಿ ಮಾಡಿದ ಅಧ್ಯಕ್ಷೆಯನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಪಕ್ಷ ಬಿಜೆಪಿ ಎಂದರು.

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಎಸ್​ಸಿ.ಎಸ್​ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡೋಕೆ ಯಾರಿಂದಲೂ ಆಗಿಲ್ಲ. ಎಸ್​ಟಿ ಮೀಸಲಾತಿಯನ್ನು ಶೇ 3 ರಿಂದ ಏಳೂವರೆ, ಎಸ್​ಸಿ ಮೀಸಲಾತಿಯನ್ನ ಶೇ 15 ರಿಂದ 17 ರವರೆಗೆ ಸಿ.ಎಂ.ಯಡಿಯೂರಪ್ಪ ನೇತೃತ್ವದ ಸರ್ಕಾರ ಹೆಚ್ಚಳ ಮಾಡಲಿದೆ ಎಂದು ಭರವಸೆ ನೀಡಿದರು.

ABOUT THE AUTHOR

...view details