ಕರ್ನಾಟಕ

karnataka

ETV Bharat / state

ರೈತರು ಬೆಳೆದ ಹೂ ಹಣ್ಣು ಸರ್ಕಾರವೇ ನೇರವಾಗಿ ಕೊಳ್ಳಲಿ: ಡಿಕೆಶಿ ಒತ್ತಾಯ - ಡಿಕೆ ಶಿವಕುಮಾರ್

ರೈತರು ಬೆಳೆದ ತರಕಾರಿ, ಹಣ್ಣು ಮತ್ತು ಹೂಗಳನ್ನ ರಾಜ್ಯ ಸರ್ಕಾರವೇ ನೇರವಾಗಿ ಖರೀದಿ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್​ ಹಾವೇರಿಯಲ್ಲಿ ಒತ್ತಾಯಿಸಿದ್ದಾರೆ.

dks
dks

By

Published : May 31, 2021, 6:49 PM IST

ಹಾವೇರಿ: ರೈತರು ಬೆಳೆದ ತರಕಾರಿ, ಹಣ್ಣು ಮತ್ತು ಹೂಗಳನ್ನ ರಾಜ್ಯ ಸರ್ಕಾರವೇ ನೇರವಾಗಿ ಖರೀದಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ಲಾಕ್​ಡೌನ್ ಸಮಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಬೆಳೆದ ತರಕಾರಿ ಹಣ್ಣು ಮತ್ತು ಹೂವುಗಳನ್ನು ಹೆಚ್ಚು ಅವಧಿಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈತರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ರೈತರಿಗೆ ಹಣ್ಣು ಹೂ ಮತ್ತು ತರಕಾರಿ ಮಾರಲು ಕೇವಲ ಎರಡು ಗಂಟೆ ಸಮಯ ನೀಡಿದ್ದೀರಾ.. ಇದರಲ್ಲಿ ರೈತರು ಜಮೀನಿನಿಂದ ಫಸಲು ತಂದು ಮಧ್ಯವರ್ತಿಗಳು ಕೇಳಿದ ದರಕ್ಕೆ ನೀಡಬೇಕಿದೆ, ಇಲ್ಲವೇ ದರ ಸಿಗಲಿಲ್ಲ ಎಂದು ಕಸದ ತೊಟ್ಟಿಗೆ ಹಾಕುವ ಸ್ಥಿತಿ ಇದೆ ಎಂದು ಡಿಕೆಶಿ ತಿಳಿಸಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಂತೆ ಸಿಎಂ ಯಡಿಯೂರಪ್ಪ ಈ ಮೊದಲೇ ಕ್ಲೀನ್ ಚೀಟ್ ನೀಡಿದ್ರಲ್ಲ ಎಂದು ತಿಳಿಸಿದರು. ಅಲ್ಲದೆ ಈ ಬಗ್ಗೆ ತಮಗೆ ಮಾಹಿತಿ ಇಲ್ಲ, ಮಾಧ್ಯಮದಲ್ಲಿ ಬರುತ್ತಿರುವುದನ್ನ ನಾನು ನೋಡಿದ್ದೇನೆ ಅಷ್ಟೇ ಎಂದು ಉತ್ತರಿಸಿದರು.

ABOUT THE AUTHOR

...view details