ಹಾವೇರಿ:ಹಾನಗಲ್‌ನ ಗ್ರಾಮದೇವತೆಯ ಕ್ಷೇತ್ರಕ್ಕೆ ಆಗಮಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ನಾಮಪತ್ರ ಸಲ್ಲಿಸುವ ವೇಳೆ ಹೊತ್ತಿದ್ದ ಹರಕೆ ತೀರಿಸಿದರು.
ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಸಿಗಲೆಂದು ಹಾನಗಲ್‌ನ ಗ್ರಾಮ ದೇವತೆಗೆ ಬೇಡಿಕೊಂಡಿದ್ದರಂತೆ. ಅದರಂತೆ ಇಂದು ದೇವಸ್ಥಾನಕ್ಕೆ ಆಗಮಿಸಿ 11 ತೆಂಗಿನಕಾಯಿ ಹೊಡೆದು ತಮ್ಮ ಹರಕೆ ಸಂಪೂರ್ಣಗೊಳಿಸಿದರು. ಈ ವೇಳೆ ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಾನಗಲ್ ನೂತನ ಶಾಸಕ ಶ್ರೀನಿವಾಸ ಮಾನೆ ಸಾಥ್ ನೀಡಿದರು.