ಕರ್ನಾಟಕ

karnataka

ETV Bharat / state

ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳಕ್ಕೆ ತೆರೆ.. ನಶಿಸುತ್ತಿರುವ ಕುಂಬಾರಿಕೆ ಉಳಿಸಲು ಬೇಕಿದೆ ನೆರವು - ETV Bharat kannada News

ಜಿಲ್ಲಾ ಮಟ್ಟದ ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳ- ಟೆರ್ರಾಕೋಟ್ ಕಲೆಯ ಮಣ್ಣಿನ ಉಪಕರಣಗಳಿಗೆ ಉತ್ತಮ ಬೇಡಿಕೆ - ಕುಂಬಾರಿಕೆ ಉಳಿಸಲು ನೆರವಿನ ಬೇಡಿಕೆ

Etv Bharat
ಕೈಗಾರಿಕಾ ಮತ್ತು ಕರಕುಶಲ ವಸ್ತುಗಳು

By

Published : Feb 10, 2023, 11:25 AM IST

Updated : Feb 10, 2023, 2:34 PM IST

ಜಿಲ್ಲಾ ಮಟ್ಟದ ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳ

ಹಾವೇರಿ :ಇತ್ತೀಚೆಗೆ ನಗರದಲ್ಲಿ ಮೂರು ದಿನಗಳ ಕಾಲ ನಡೆದ ನಡೆದ ಜಿಲ್ಲಾ ಮಟ್ಟದ ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳಕ್ಕೆ ತೆರೆ ಬಿದ್ದಿದೆ. ಇಲ್ಲಿನ ಗುರುಭವನದಲ್ಲಿ ನಡೆದ ಮಾರಾಟ ಮೇಳ ಮತ್ತು ಪ್ರದರ್ಶನ ಬುಧವಾರ ಮುಕ್ತಾಯವಾಯಿತು. ಸುಮಾರು 16 ಮಳಿಗೆಗಳಲ್ಲಿ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ ಖಾದಿ ಗ್ರಾಮೋದ್ಯೂಗ ಉತ್ಪನ್ನಗಳ ತಯಾರಕರು, ಮಹಿಳೆಯರ ಅಲಂಕಾರಿಕ ಉಪಕರಣಗಳು, ಚಿಣ್ಣರ ಗೊಂಬೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಜೋರಾಗಿತ್ತು. ಮೇಳದಲ್ಲಿ ಟೆರ್ರಾಕೋಟ್ ಕಲೆಯ ಮಣ್ಣಿನ ಸಲಕರಣಿಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿಯಿಂದ ಆಗಮಿಸಿದ್ದ ಕಲಾವಿದ ನಾಗರಾಜ್ ಚಕ್ರಸಾಲಿ ತಯಾರಿಸಿದ ಉತ್ಪನ್ನಗಳಿಗೆ ಭರ್ಜರಿ ಡಿಮ್ಯಾಂಡ್ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಟೆರ್ರಾಕೋಟ್ ಕಲಾವಿದ ನಾಗರಾಜ್​ ಅವರು, ಚಕ್ರಸಾಲಿ ಪ್ರಸ್ತುತ ದಿನಗಳಲ್ಲಿ ಕುಂಬಾರಿಕೆ ಅವಸಾನದ ಅಂಚು ತಲುಪಿದೆ. ಪ್ರಾಚೀನ ಕರಕುಶಲಕರ್ಮಗಳಲ್ಲಿ ಒಂದಾಗಿರುವ ಕುಂಬಾರಿಕೆಗೆ ಮೊದಲು ಹೆಚ್ಚಿನ ಬೇಡಿಕೆ ಇತ್ತು. ಅಡುಗೆ ನೀರಿಗಾಗಿ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳನ್ನು ಇದೀಗ ಕೇಳುವವರಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.

ಟೆರ್ರಾಕೋಟಾ ಕಲೆಗೆ ಸಿಕ್ಕ ಬೆಲೆ :ನಾನ್​ ಸ್ಟಿಕ್ ತವಾ ಬಂದ ನಂತರ ನಮ್ಮನ್ನು ಮಾತನಾಡಿಸುವವರೇ ಇಲ್ಲಾ. ಪ್ಲಾಸ್ಟಿಕ್ ಮತ್ತು ಸಿರಾಮಿಕ್ಸ್ ಉಪಕರಣಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವದರಿಂದ ಗ್ರಾಹಕರು ಕುಂಬಾರರಿಂದ ಹಿಮ್ಮುಖರಾಗಿದ್ದಾರೆ ಎಂದು ನಾಗರಾಜ್ ಅಭಿಪ್ರಾಯಪಟ್ಟರು. ಇವುಗಳ ನಡುವೆ ಕುಂಬಾರಿಕೆಗೆ ಆಧುನಿಕ ಸ್ಪಷ್ಟ ನೀಡಿ ನಾನು ಮಣ್ಣಿನಲ್ಲಿ ಟೆರ್ರಾಕೋಟಾ ಕಲೆ ಅಳವಡಿಸಿಕೊಂಡಿದ್ದೇನೆ. ಇದರಿಂದ ನನ್ನ ಕಲಾಕೃತಿಗಳಿಗೆ ಉತ್ತಮ ಬೇಡಿಕೆ ಇದೆ ಎಂದರು.

ಚಂದ್ರಗುತ್ತಿಯಿಂದ ಮಣ್ಣು ತಂದು ಈ ಕಲಾಕೃತಿಗಳನ್ನು ರಚಿಸುತ್ತಿದ್ದು, ಟೆರ್ರಾಕೋಟಾದಲ್ಲಿ ಸುಮಾರು 40 ಬಗೆಯ ವೈವಿದ್ಯಮಯ ಕಲಾಕೃತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಹಕರು ಕೇಳಿದ ಡಿಜೈನ್ ಸಹ ಮಾಡಿಕೊಡುತ್ತಿದ್ದೇನೆ. ಇದರಿಂದ ವಹಿವಾಟು ಉತ್ತಮವಾಗಿದ್ದು, ದಿನನಿತ್ಯದ ಜೀವನಕ್ಕೆ ಕೊರತೆಯಿಲ್ಲಾ ಎಂದು ನಾಗರಾಜ್ ಅವರು ತಮ್ಮ ವ್ಯಾಪಾರ ವಹಿವಾಟಿನ ಕುರಿತು ಈಟಿವಿ ಭಾರತಕ್ಕೆ ವಿವರಿಸಿದರು.

ಇನ್ನು, ಹಾವೇರಿ ಮಾತ್ರವಲ್ಲದೆ ಮಹಾರಾಷ್ಟ್ರದ ಪುಣಿ, ಮುಂಬೈ ಮತ್ತು ನಾಸಿಕ್ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದ್ದೇನೆ ಎಂದು ತಮ್ಮ ವ್ಯಾಪಾರದ ಬಗ್ಗೆ ಹೇಳಿದರು. ಸರ್ಕಾರ ಕುಂಬಾರಿಕೆಯ ನೆರವಿಗೆ ಬರದಿದ್ದರೆ ಈ ಕಸಬು ನಶಿಸುವದಕ್ಕೆ ಬಹಳ ದಿನ ಉಳಿದಿಲ್ಲಾ ಎಂಬ ಆತಂಕವನ್ನು ಕೂಡ ನಾಗರಾಜ್ ವ್ಯಕ್ತಪಡಿಸಿದರು.

ಮಣ್ಣಿನ ಕಲಾಕೃತಿಗಳಿಗೆ ಅಧುನಿಕ ಸ್ಪರ್ಶ: ಕುಂಬಾರರು ಸಹ ತಮ್ಮ ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟು ಪ್ರಸ್ತುತ ಗ್ರಾಹಕರಿಗೆ ಬೇಕಾಗುವ ಸಾಮಗ್ರಿಗಳನ್ನು ತಯಾರಿಸಬೇಕು. ಅಂತಹ ಉಪಕರಣಗಳಿಗೆ ಅಧುನಿಕ ಸ್ಪರ್ಷ ನೀಡಿದರೆ ಗ್ರಾಹಕರು ಮತ್ತೆ ಕುಂಬಾರರ ಹತ್ತಿರ ಬರುತ್ತಾರೆ. ತಾವು ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರದರ್ಶನ ಏರ್ಪಡಿಸಿ ಹಲವು ಪ್ರಶಸ್ತಿ ಪಡೆದಿದ್ದೇನೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಕಲೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಆದರೆ ನಮ್ಮ ಕುಂಬಾರಿಕೆಗೆ ಟೆರ್ರಾಕೋಟ್ ಕಲೆಗೆ ಡಿಜೈನ್ ಹೌಸ್ ಇಲ್ಲದಿರುವದರಿಂದ ಕುಂಬಾರಿಕೆಗೆ ತೀವ್ರ ಹಿನ್ನೆಡೆಯಾಗುತ್ತಿದೆ. ಸರ್ಕಾರ ಮತ್ತು ಜಿಲ್ಲಾಡಳಿತಗಳು ಡಿಜೈನ್ ಹೌಸ್ ನಿರ್ಮಿಸಿ ಸೂಕ್ತ ತರಭೇತಿ ನೀಡಿದರೆ ನಶಿಸುತ್ತಿರುವ ಕುಂಬಾರಿಕೆಯನ್ನು ಉಳಿಸಬಹುದು. ಮಣ್ಣಿನಿಂದ ತಯಾರಿಸುವ ಕಲಾಕೃತಿಗಳನ್ನು ಬೆಂಕಿಯಲ್ಲಿ ಸುಡಬೇಕು. ಸುಟ್ಟ ನಂತರ ಆಕರ್ಷಕ ಬಣ್ಣ ನೀಡಬೇಕು. ಕಲಾಕೃತಿ ಉತ್ತಮವಾಗಿದ್ದರೆ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕುಂಬಾರರು ಯೋಚಿಸಬೇಕಿದೆ ಎಂದು ನಾಗರಾಜ್ ತಿಳಿಸಿದರು.

ಇದನ್ನೂ ಓದಿ :ಕೈಮುಗಿದು ಏರು ಇದು ಕನ್ನಡದ ತೇರು.. ‘ಕನ್ನಡ ರಥ’ವಾದ ಹಾವೇರಿಯ ಸಾರಿಗೆ ಬಸ್​

Last Updated : Feb 10, 2023, 2:34 PM IST

ABOUT THE AUTHOR

...view details