ಕರ್ನಾಟಕ

karnataka

ETV Bharat / state

ನಾವೇ ತಂದಿರೋ ಆಕಳು ಬಿಎಸ್​ವೈ: ಸಿಎಂ ಕ್ಷಮೆ ಕೇಳಿದ ದಿಂಗಾಲೇಶ್ವರ ಶ್ರೀಗಳು - ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ '

ಯಾವ ಜಾತಿಯನ್ನೂ ತಲೆಯಲ್ಲಿಟ್ಟುಕೊಳ್ಳದೆ ಎಲ್ಲರಿಗಾಗಿ ಕೆಲಸ ಮಾಡೋ ಸಿಎಂ ನಮಗೆ ಸಿಕ್ಕಿದ್ದಾರೆ. ಯಡಿಯೂರಪ್ಪ ಕಾಲಿಟ್ಟಲ್ಲೆಲ್ಲ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗುತ್ತಾರೆ ಎಂದು ದಿಂಗಾಲೇಶ್ವರ ಶ್ರೀಗಳು ಬಿಎಸ್​ವೈರನ್ನು ಕೊಂಡಾಡಿದ್ದಾರೆ.

ಸಿಎಂ ಕ್ಷಮೆ ಕೇಳಿದ ದಿಂಗಾಲೇಶ್ವರ ಶ್ರೀಗಳು
ಸಿಎಂ ಕ್ಷಮೆ ಕೇಳಿದ ದಿಂಗಾಲೇಶ್ವರ ಶ್ರೀಗಳು

By

Published : Jan 15, 2020, 4:32 PM IST

ಹಾವೇರಿ: ಹರಿಹರದ ಪಂಚಮಸಾಲಿ ಪೀಠದ ವಚನಾನಂದರ ನಿನ್ನೆಯ ನಡೆಗೆ ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮುಖ್ಯಮಂತ್ರಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅಂಬಿಗರ ಚೌಡಯ್ಯ ಜಯಂತ್ಯೋತ್ಸವದಲ್ಲಿ ಮಾತನಾಡಿದ ಗದಗ ಜಿಲ್ಲೆಯ ಬಾಳೆಹೊಸೂರಿನ ದಿಂಗಾಲೇಶ್ವರ ಮಠದ ಸ್ವಾಮೀಜಿ, ಸಿ.ಎಂ.ಯಡಿಯೂರಪ್ಪರಲ್ಲಿ ಸ್ವಾಮೀಜಿಗಳ ಪರವಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದರು.

ಸಿಎಂ ಕ್ಷಮೆ ಕೇಳಿದ ದಿಂಗಾಲೇಶ್ವರ ಶ್ರೀಗಳು

ಯಾವ ಜಾತಿಯನ್ನೂ ತಲೆಯಲ್ಲಿಟ್ಟುಕೊಳ್ಳದೆ ಎಲ್ಲರಿಗಾಗಿ ಕೆಲಸ ಮಾಡೋ ಸಿಎಂ ನಮಗೆ ಸಿಕ್ಕಿದ್ದಾರೆ. ಯಡಿಯೂರಪ್ಪ ಕಾಲಿಟ್ಟಲ್ಲೆಲ್ಲ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗುತ್ತಾರೆ. ರಾಜ್ಯದ ರಸ್ತೆಗಳಲ್ಲಿನ ಗುಂಡಿಗಳನ್ನು ಒಂದೇ ತಿಂಗಳಲ್ಲಿ ಮುಚ್ಚಲಾಗಿದೆ. ನಾವೇ ತಂದಿರೋ ಆಕಳು ಯಡಿಯೂರಪ್ಪ. ಈ ಆಕಳನ್ನು ಹೊಡೆದು ಬಡಿದು ಹಿಂಡಿಸ್ತೀವಿ ಅಂದ್ರೆ ಹಿಂಡೋದಿಲ್ಲ. ಯಾರು ಯಾವಾಗ ಬೇಕಾದ್ರೂ ತಂಬಿಗೆ ತಗೊಂಡು ಹೋದ್ರೂ ಹಾಲು ಕೊಡೋ ಆಕಳು ಯಡಿಯೂರಪ್ಪ ಎಂದು ಬಿಎಸ್​ವೈ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಯಾವುದೇ ಗಾಳಿ ಬಂದ್ರೂ ಅಲುಗಾಡದ ಗುಡ್ಡ ಅಂದ್ರೆ ಅದು ಯಡಿಯೂರಪ್ಪ. ಯಡಿಯೂರಪ್ಪ ಇಲ್ಲ ಅಂದ್ರೆ ಏನೂ ಇಲ್ಲ ಅನ್ನೋದು ಜನರಿಗೆ ಅರ್ಥವಾಗಿದೆ. ಅವರು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಿಯೇ ಮಾಡ್ತಾರೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ABOUT THE AUTHOR

...view details