ಹಾನಗಲ್: ಬಿಜೆಪಿ ಹೈಕಮಾಂಡ್ ಆದೇಶದಂತೆ ತಾಲೂಕಿನಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಶಾಸಕ ಸಿ.ಎಂ.ಉದಾಸಿ ನಿವಾಸದಲ್ಲಿ ಗ್ರಾಮೀಣ ಮಟ್ಟದ ಡಿಜಿಟಲ್ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಬಿಜೆಪಿಯಿಂದ ಡಿಜಿಟಲ್ ರ್‍ಯಾಲಿಗೆ ತಯಾರಿ: ಗ್ರಾಮೀಣ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ - ಬಿಜೆಪಿ ಹೈ ಕಮಾಂಡ್ ಆದೇಶ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪಕ್ಷದ ಜನಹಿತ ಕಾರ್ಯಗಳನ್ನು ಎಲ್ಲಾ ಜನತೆಗೆ ತಲುಪಿಸುವುದು ಡಿಜಿಟಲ್ ರ್‍ಯಾಲಿ ಉದ್ದೇಶವಾಗಿದೆ. ಇಂದಿನ ಯುವ ಉತ್ಸಾಹಿ ಯುವಕರು ಈ ಡಿಜಿಟಲ್ ತಂಡದಲ್ಲಿ ಸೇರಿಕೊಂಡು ಕೆಲಸ ಮಾಡಲಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಕೊರೊನಾ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ರ್‍ಯಾಲಿನಡೆಸಲು ಆಗುವುದಿಲ್ಲ. ಆದ್ದರಿಂದ ವಾಟ್ಸ್ಆ್ಯಪ್, ಫೇಸ್ಬುಕ್ಗಳ ಮೂಲಕ ಡಿಜಿಟಲ್ ರ್‍ಯಾಲಿ ನಡೆಸಿ ಸರ್ಕಾರದ ಸಾಧನೆ ಮತ್ತು ಪಕ್ಷ ಸಂಘಟನೆಯ ಬಗ್ಗೆ ತಿಳಿಸಲು ಅನೂಕೂಲ ಆಗುವ ದೃಷ್ಟಿಯಿಂದ ಈ ತಂಡ ರಚಿಸಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ ತಿಳಿಸಿದರು.
ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ, ಹಳ್ಳಿಗಳು, ಬೂತ್ಗಳಲ್ಲಿ ಪಕ್ಷದ ಯುವಕರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪಕ್ಷದ ಜನಹಿತ ಕಾರ್ಯಗಳನ್ನು ಎಲ್ಲಾ ಜನತೆಗೆ ತಲುಪಿಸುವ ಉದ್ದೇಶ ಇದರದ್ದಾಗಿದೆ. ಇಂದಿನ ಯುವ ಉತ್ಸಾಹಿ ಯುವಕರು ಈ ಡಿಜಿಟಲ್ ತಂಡದಲ್ಲಿ ಸೇರಿಕೊಂಡು ಕಾರ್ಯ ಮಾಡಲಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.