ರಾಣೆಬೆನ್ನೂರು: ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರೆ ಅಂತ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.
ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರೆ ಅಂತ ಹೇಳಿಲ್ಲ: ಆರ್.ಶಂಕರ್ ಸ್ಪಷ್ಟನೆ - ಆರ್.ಶಂಕರ್ ಲೇಟೆಸ್ಟ್ ನ್ಯೂಸ್
'ದಾವಣಗೆರೆಯಲ್ಲಿ ನಡೆದ ಸಮಾವೇಶ ಸಿದ್ದರಾಮಯ್ಯ ಸಿಎಂ ಆಗಲು ದಿಕ್ಸೂಚಿ ಎಂದು ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಮುಂದಿನ ಸಿಎಂ ಅಂತಲ್ಲ'.
ವಿಧಾನ ಪರಿಷತ್ ಸದಸ್ಯ ಆರ್.ಶಂಕರ್
ರಾಣೆಬೆನ್ನೂರಿನಲ್ಲಿ ಈಟಿವಿ ಭಾರತ ಜತೆ ಮಾತನಾಡಿದ ಅವರು, 2012ರಲ್ಲಿ ದಾವಣಗೆರೆಯಲ್ಲಿ ನಡೆದ ಸಮಾವೇಶ ಸಿದ್ದರಾಮಯ್ಯ ಸಿಎಂ ಆಗಲು ದಿಕ್ಸೂಚಿ ಎಂದು ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಮುಂದಿನ ಸಿಎಂ ಅಂತಲ್ಲ. ಇದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಬಿಜೆಪಿ ಮೇಲ್ಮನೆ ಸದಸ್ಯನಾಗಿ ಇತರೆ ಪಕ್ಷದ ಪರವಾಗಿ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಅಧಿವೇಶನ ಮುಗಿಯುತ್ತಿದ್ದಂತೆ ಸಂಪುಟ ಸರ್ಕಸ್: ಸಿಎಂ ಭೇಟಿಯಾದ ಆರ್.ಶಂಕರ್!
Last Updated : Jan 7, 2021, 3:44 PM IST