ಕರ್ನಾಟಕ

karnataka

By

Published : Dec 25, 2019, 11:08 AM IST

ETV Bharat / state

ನೆರೆ ಪರಿಹಾರದಲ್ಲಿ ತಾರತಮ್ಯ ಆರೋಪ: ಗ್ರಾಮ ಪಂಚಾಯಿತಿಗೆ ಬೀಗ ಜಡಿದ ದೇವಗಿರಿ ಗ್ರಾಮಸ್ಥರು

ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ಪರಿಹಾರದ ಹಣ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ ದೇವಗಿರಿ ಗ್ರಾಮಸ್ಥರು, ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

villagers  locked the Gram panchayath
ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿರುವ ಹಳ್ಳಿಗರು

ಹಾವೇರಿ: ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಸಿಗಬೇಕಾದ ಪರಿಹಾರದ ಹಣ ಮನೆ ಇದ್ದವರಿಗೆ ಸಿಕ್ಕಿದೆ ಎಂದು ಆಕ್ರೋಶಗೊಂಡ ದೇವಗಿರಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದರು.

ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು, ಇನ್ನೂರಕ್ಕೂ ಅಧಿಕ ಮನೆಗಳು ಧರೆಗುರುಳಿವೆ, ಆದರೆ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡದೆ ಮನೆ ಇದ್ದವರಿಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿರುವ ಹಳ್ಳಿಗರು

ನೆರೆ ಸಂತ್ರಸ್ತರನ್ನು ಮೂರು ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ. ಆದರೆ ಸಿ ಶ್ರೇಣಿಯವರಿಗೆ ಹೆಚ್ಚು ಹಣ ಸಿಕ್ಕಿದೆ. ಎ ಶ್ರೇಣಿಯವರಿಗೆ ಕಡಿಮೆ ಹಣ ಸಿಕ್ಕಿದೆ. ಅಲ್ಲದೇ ಇದರಲ್ಲಿ ಮನೆ ಇದ್ದವರೂ ಸಹ ಫಲಾನುಭವಿಗಳಾಗಿದ್ದು, ಸೂಕ್ತ ತನಿಖೆ ನಡೆಸಿ ನಂತರವೇ ಪರಿಹಾರ ಹಣ ವಿತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details