ಹಾವೇರಿ:ಇಲ್ಲಿನ ರೈತರು ಬೆಳೆದ ಮಾವನ್ನು ನೈಸರ್ಗಿಕವಾಗಿ ಮಾಗಿಸಿ ಮಾರುತ್ತಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.
ಹಾವೇರಿ ಜಿಲ್ಲಾಡಳಿತ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣಿಗೆ ರಾಜ್ಯದೆಲ್ಲೆಡೆ ಬೇಡಿಕೆ - ಹಾವೇರಿ ಮಾವು
ಹಾವೇರಿ ಜಿಲ್ಲಾಡಳಿತ ರೈತರಿಂದ ಮಾವಿನಕಾಯಿ ಖರೀದಿಸುತ್ತಿದೆ. ಅದನ್ನ ನೈಸರ್ಗಿಕವಾಗಿ ಮಾಗಿಸಿ ಹಾವೇರಿ ಅಲ್ಫಾನ್ಸೋ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಭೂತಾಯಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಅಡಿಯಲ್ಲಿ ಈಗಾಗಲೇ 100 ಟನ್ ಮಾವು ಖರೀದಿಸಿ ಜಿಲ್ಲಾಡಳಿತ ಮಾರಾಟ ಮಾಡುತ್ತಿದೆ. ಈ ಹಿನ್ನೆಲೆ ರಾಜ್ಯದೆಲ್ಲೆಡೆ ಹಾವೇರಿ ಮಾವಿಗೆ ಭಾರೀ ಬೇಡಿಕೆ ಬಂದಿದೆ.
ಹಾವೇರಿ ಜಿಲ್ಲಾಡಳಿತ ರೈತರ ಮಾವಿನಕಾಯಿ ಖರೀದಿಸುತ್ತಿದೆ. ಅದನ್ನ ನೈಸರ್ಗಿಕವಾಗಿ ಮಾಗಿಸಿ ಹಾವೇರಿ ಅಲ್ಫಾನ್ಸೋ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಭೂತಾಯಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಅಡಿಯಲ್ಲಿ ಈಗಾಗಲೇ 100 ಟನ್ ಮಾವು ಖರೀದಿಸಿ ಜಿಲ್ಲಾಡಳಿತ ಮಾರಾಟ ಮಾಡುತ್ತಿದೆ.
ಜಿಲ್ಲಾಡಳಿತದ ಈ ನಿರ್ಧಾರದಿಂದ ಗ್ರಾಹಕರ ಹಣ ನೇರವಾಗಿ ರೈತರ ಕೈಸೇರಲಿದೆ. ಅಲ್ಲದೆ ಮಧ್ಯವರ್ತಿಗಳ ಕಾಟಕ್ಕೆ ಬ್ರೇಕ್ ಬೀಳಲಿದೆ. ಕೆಜಿ ಹಣ್ಣಿಗೆ 100 ರೂಪಾಯಿ, 12 ಹಣ್ಣುಗಳ ಬಾಕ್ಸ್‌ಗೆ 300 ರೂಪಾಯಿ ಹಣ ನಿಗದಿ ಮಾಡಿದೆ. ಜಿಲ್ಲಾಡಳಿತದ ಈ ಹಾವೇರಿ ಅಲ್ಫಾನ್ಸೋ ಮಾವಿಗೆ ರಾಜ್ಯದೆಲ್ಲಡೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.