ಕರ್ನಾಟಕ

karnataka

ETV Bharat / state

ಹಬ್ಬದ ಮೇಲೆ ಕೊರೊನಾ ಕರಿನೆರಳು... ಸಂಕಷ್ಟಕ್ಕೆ ಸಿಲುಕಿದ ಗಣೇಶ ಮೂರ್ತಿ ತಯಾರಕರು - Ganesh Festival 2020

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯ ನಾಗಪ್ಪನ ತಯಾರಿಕೆಯೊಂದಿಗೆ ಗಣೇಶ ಮೂರ್ತಿಗಳ ತಯಾರಿ ಕೂಡ ಆರಂಭವಾಗುತ್ತದೆ. ಆದ್ರೆ ಈ ಬಾರಿ ಗಣೇಶ ಮೂರ್ತಿ ತಯಾರಕರು ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಕೊರೊನಾದ ಕರಿನೆರಳು ಇವರ ಮೇಲೆಯೂ ಬಿದ್ದಿದೆ. ಲಂಬೋದರನ ಮೂರ್ತಿ ಕೊಳ್ಳಲು ಮುಗಿಬೀಳುತ್ತಿದ್ದ ಗ್ರಾಹಕರು ಯಾರೂ ಮಾರುಕಟ್ಟೆಗೆ ಬರುತ್ತಿಲ್ಲ.

ಮಾರಾಟವಾಗದೆ ಉಳಿದ ಗಣೇಶ ಮೂರ್ತಿಗಳು

By

Published : Aug 21, 2020, 4:08 PM IST

ಹಾವೇರಿ: ಗಣೇಶ ಚತುರ್ಥಿ ಬಂದರೆ ಸಾಕು, ವಿಘ್ನ ನಿವಾರಕನ ಮೂರ್ತಿ ತಯಾರಿಸುವ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ, ಈ ಬಾರಿ ಕೊರೊನಾದಿಂದಾಗಿ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾದಿಂದಾಗಿ ಗ್ರಾಹಕರು ಕಡಿಮೆ ಬೆಲೆಗಳಿಗೆ ಗಣೇಶ ಮೂರ್ತಿಗಳನ್ನು ಕೇಳುತ್ತಿದ್ದಾರೆ. ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ತಯಾರಿಸಿದ ಮೂರ್ತಿಗಳೆಲ್ಲಾ ಮಾರಾಟವಾಗುತ್ತಿದ್ದವು. ಆದರೆ, ಈ ವರ್ಷ ಹಬ್ಬಕ್ಕೆ ಒಂದು ದಿನ ಬಾಕಿ ಇದ್ದರೂ, ಮೂರ್ತಿಗಳು ಮಾರಾಟವಾಗಿಲ್ಲಾ ಎನ್ನುತ್ತಿದ್ದಾರೆ ಮೂರ್ತಿ ತಯಾರಕರು.

ಮಾರಾಟವಾಗದೆ ಉಳಿದ ಗಣೇಶ ಮೂರ್ತಿಗಳು

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯ ನಾಗಪ್ಪನ ತಯಾರಿಕೆಯೊಂದಿಗೆ ಗಣೇಶ ಮೂರ್ತಿಗಳ ತಯಾರಿಕೆ ಕೂಡ ಆರಂಭವಾಗುತ್ತದೆ. ಪ್ರಸ್ತುತ ವರ್ಷ ಕೂಡ ಗಣೇಶ ಮೂರ್ತಿ ತಯಾರಕರು ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಲಂಬೋದರನ ಮೂರ್ತಿ ಕೊಳ್ಳಲು ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ.

ಗಣೇಶ ಚತುರ್ಥಿ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದುಕೊಂಡ ಕಲಾವಿದರು, ಸಾವಿರಾರು ಮೂರ್ತಿಗಳನ್ನು ತಯಾರಿಸಿದ್ದರು. ಆದರೆ, ಕೊರೊನಾ ಅಟ್ಟಹಾಸ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ, ಹಬ್ಬ ಆಚರಣೆಗೆ ಸರ್ಕಾರ ಹಲವು ನಿಯಮಗಳನ್ನು ರೂಪಿಸಿದೆ. ಮನೆಗಳಲ್ಲಿ ಎರಡು ಅಡಿ ಎತ್ತರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಎತ್ತರದ ಮೂರ್ತಿ ಇಡುವಂತೆ ಹೇಳಿದೆ. ಜೊತೆಗೆ ಪರಿಸರ ಪ್ರಿಯ ಗಣೇಶ ಮೂರ್ತಿಗಳಿಗೆ ಗ್ರಾಹಕರು ಒಲವು ತೋರುತ್ತಿದ್ದಾರೆ. ಇವೆಲ್ಲವೂ ಮೂರ್ತಿ ತಯಾರಕರ ಮಾರಾಟದ ಮೇಲೆ ಪರಿಣಾಮ ಬೀರಿವೆ.

ABOUT THE AUTHOR

...view details