ಹಾವೇರಿ:ಮಣ್ಣು ಹೇರಿಕೊಂಡು ಹೋಗ್ತಿದ್ದ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಚಾಲಕ ಟ್ರೇಲರ್ ಮಧ್ಯೆ ಸಿಲುಕಿಕೊಂಡು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ ಬಳಿ ನಡೆದಿದೆ.
ಟ್ರ್ಯಾಕ್ಟರ್ ಮಗುಚಿ ಚಾಲಕ ಸಾವು ಮೃತನನ್ನು ಸಂದೀಪ ಕೆ.ಎಂ.(28) ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಯಲಿವಾಳ ಗ್ರಾಮದ ನಿವಾಸಿ ಎನ್ನಲಾಗಿದೆ.
ಓದಿ: ಕಾರು- ಬೊಲೆರೋ ನಡುವೆ ಅಪಘಾತ: ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಗಾಯ
ಟ್ರ್ಯಾಕ್ಟರ್ನಲ್ಲಿ ಮಣ್ಣು ಹೇರಿಕೊಂಡು ಚಿಕ್ಕೇರೂರು ಗ್ರಾಮದ ಸಂತೋಷ ಮಡಿವಾಳರ ಎಂಬ ರೈತನ ಜಮೀನಿನಲ್ಲಿದ್ದ. ದಿಬ್ಬ ಹತ್ತಿಸೋ ವೇಳೆ ಟ್ರ್ಯಾಕ್ಟರ್ನ ಮುಂದಿನ ಭಾಗ ಮೇಲಕ್ಕೆದ್ದು, ಮುಗುಚಿ ಪಲ್ಟಿಯಾಗಿದೆ. ಈ ಸಂಬಂಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.