ಕರ್ನಾಟಕ

karnataka

ETV Bharat / state

ಕಾಲುವೆಯಲ್ಲಿ ಏಕಾಏಕಿ ಹರಿದ ಅಧಿಕ ನೀರು: ಎತ್ತುಗಳ ಸಾವು - haveri news

ಯುಟಿಪಿ ಕಾಲುವೆಯಲ್ಲಿ ಮೈತೊಳೆಯುತ್ತಿದ್ದ ಸಂದರ್ಭದಲ್ಲಿ ಕಾಲುವೆಯಲ್ಲಿ ಒಮ್ಮಿದೊಮ್ಮೆಲೇ ಅಧಿಕ ನೀರು ಬಂದಿದ್ದರಿಂದ ಎತ್ತುಗಳು ನೀರು ಕುಡಿದು ಸಾವನ್ನಪ್ಪಿರುವ ಘಟನೆ ಹಾವೇರಿ ಸಮೀಪದ ಭೂಕೋಡಿಹಳ್ಳಿಯಲ್ಲಿ ನಡೆದಿದೆ.

ಯುಟಿಪಿ ಕಾಲುವೆ ಒಮ್ಮಿದೊಮ್ಮೆಲೇ ಹರಿದ ನೀರು..ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಎತ್ತುಗಳು..!

By

Published : Oct 12, 2019, 9:47 PM IST

ಹಾವೇರಿ: ಯುಟಿಪಿ ಕಾಲುವೆಯಲ್ಲಿ ಮೈತೊಳೆಯುತ್ತಿದ್ದ ಸಂದರ್ಭದಲ್ಲಿ ಕಾಲುವೆಯಲ್ಲಿ ಒಮ್ಮಿದೊಮ್ಮೆಲೇ ಅಧಿಕ ನೀರು ಬಂದಿದ್ದರಿಂದ ಎತ್ತುಗಳು ನೀರು ಕುಡಿದು ಸಾವನ್ನಪ್ಪಿರುವ ಘಟನೆ ಹಾವೇರಿ ಸಮೀಪದ ಭೂಕೋಡಿಹಳ್ಳಿಯಲ್ಲಿ ನಡೆದಿದೆ.

ಯುಟಿಪಿ ಕಾಲುವೆ ಒಮ್ಮಿದೊಮ್ಮೆಲೇ ಹರಿದ ಅಧಿಕ ನೀರು

ಭೂಕೋಡಿಹಳ್ಳಿಯ ವೀರಪ್ಪ ಮತ್ತಿಹಳ್ಳಿ ಎಂಬುವವರಿಗೆ ಸೇರಿದ ಎತ್ತುಗಳಿಗೆ ಶನಿವಾರ ಯುಟಿಪಿ ಕಾಲುವೆಯಲ್ಲಿ ಮೈ ತೊಳೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾಲುವೆಯಲ್ಲಿ ಒಮ್ಮಿದೊಮ್ಮೆಲೇ ಅಧಿಕ ನೀರು ಬಂದಿದ್ದರಿಂದ ಈ ಘಟನೆ ಸಂಭವಿಸಿದೆ. ತನ್ನ ನೆಚ್ಚಿನ ಎತ್ತುಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನ್ನ ಕಂಡ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಬಾಲಕ ಅಳುವುದನ್ನು ಕಂಡು ಗ್ರಾಮಸ್ಥರು ಸಹ ದುಃಖ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಬಾಲಕನನ್ನ ಸಮಾಧಾನ ಮಾಡಿದ ಬಳಿಕ ಬಾಲಕ ಅಳುವುದನ್ನ ನಿಲ್ಲಿಸಿದ್ದಾನೆ.


ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಸಾವನ್ನಪ್ಪಿದ್ದರೂ ಯಾವ ಅಧಿಕಾರಿಗಳು ಬರದ ಕಾರಣ ರೈತರು ಪ್ರತಿಭಟನೆ ನಡೆಸಿದರು. ಅಲ್ಲದೆ ಕಾಲುವೆಯನ್ನ ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಅವಘಡಕ್ಕೆ ಕಾರಣ ಎಂದು ಆರೋಪಿಸಿದರು.

ABOUT THE AUTHOR

...view details