ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದ ಇಸ್ಲಾಂಪುರ ಬಳಿಯ ಹೊಂಡದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಹೊಂಡದಲ್ಲಿ ನವಜಾತ ಶಿಶು ಶವ ಪತ್ತೆ: ಮಮ್ಮಲ ಮರುಗಿದ ಜನ - Savanur town in Haveri district
ದುಷ್ಕರ್ಮಿಗಳು ನವಜಾತ ಹೆಣ್ಣು ಶಿಶುವನ್ನ ಹೊಂಡದಲ್ಲಿ ಎಸೆದು ಹೋಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
![ಹೊಂಡದಲ್ಲಿ ನವಜಾತ ಶಿಶು ಶವ ಪತ್ತೆ: ಮಮ್ಮಲ ಮರುಗಿದ ಜನ dd](https://etvbharatimages.akamaized.net/etvbharat/prod-images/768-512-9496270-thumbnail-3x2-vish.jpg)
ಹೊಂಡದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ
ಹೊಂಡದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ
ದುಷ್ಕರ್ಮಿಗಳು ನಿನ್ನೆ ರಾತ್ರಿ ಶಿಶುವನ್ನ ಬಿಸಾಡಿ ಹೋಗಿರುವ ಶಂಕೆ ಇದ್ದು, ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಶುವನ್ನು ಅಮಾನವೀಯವಾಗಿ ಎಸೆದು ಹೋದ ದುಷ್ಕರ್ಮಿಗಳ ಕೃತ್ಯಕ್ಕೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಘಟನೆ ಸಂಬಂಧ ಸವಣೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.