ಹಾವೇರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವ್ಯಾಪಕ ಹಾನಿಯಾಗುತ್ತಿದೆ. ಈ ಭಾನುವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ 65 ವರ್ಷದ ಬಸವರಾಜ್ ಹತ್ತಿಮತ್ತೂರು ಮೃತದೇಹ ಇಂದು ಪತ್ತೆಯಾಗಿದೆ.
ಮಳೆಯಲ್ಲಿ ಕೊಚ್ಚಿಹೋದ ವ್ಯಕ್ತಿ: ಮೃತದೇಹ ಪತ್ತೆ! - ಹಾವೇರಿ ಕ್ರೈಂ ಸುದ್ದಿ
ಭಾನುವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ 65 ವರ್ಷದ ಬಸವರಾಜ್ ಹತ್ತಿಮತ್ತೂರು ಮೃತದೇಹ ಇಂದು ಪತ್ತೆಯಾಗಿದೆ.
ಮಳೆಯಲ್ಲಿ ಕೊಚ್ಚಿಹೋದ ವ್ಯಕ್ತಿ : ಮೃತದೇಹ ಪತ್ತೆ
ನಗರದಲ್ಲಿ 2 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಹಳ್ಳಗಳಂತಾಗಿವೆ. ನಿನ್ನೆ ಬಸವರಾಜ್ ಹಾವೇರಿ ಠಾಣೆ ಮುಂದೆ ಹೋಗುತ್ತಿದ್ದ ವೇಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದ. ಕಳೆದ ರಾತ್ರಿ ನಾಪತ್ತೆಯಾಗಿದ್ದ ಬಸವರಾಜ ಹುಡುಕಾಟ ನಡೆದಿತ್ತು. ಆದರೆ, ಮನೆಯಿಂದ ಹೊರಗೆ ಹೋಗಿ ನೀರುಪಾಲಾಗಿದ್ದ ಬಸವರಾಜ್ ಮೃತದೇಹ ಇಂದು ಪತ್ತೆಯಾಗಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆ ಬಸವರಾಜ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.