ಕರ್ನಾಟಕ

karnataka

ETV Bharat / state

ದಾವಣಗೆರೆ, ಹಾವೇರಿಯಲ್ಲೂ ಕೊರೊನಾ ಸೋಂಕಿತ ಪ್ರಕರಣಗಳು ಇಳಿಮುಖ - ದಾವಣಗೆರೆ ಇಂದಿನ ಕೊರೊನಾ ಸುದ್ಧಿ

ದಾವಣಗೆರೆಯಲ್ಲಿ 60 ಕೊರೊನಾ‌ ಪ್ರಕರಣಗಳು ದೃಢಪಟ್ಟರೇ, ಹಾವೇರಿಯಲ್ಲಿ 19  ಸೋಂಕಿತರು ಪತ್ತೆಯಾಗಿದ್ದು ಪ್ರತಿದಿನವೂ ಪ್ರಕರಣಗಳ ಸಂಖ್ಯೆ ಇಳಿಮುಖ ಕಾಣ್ತಿವೆ..

corona
ಕೊರೊನಾ

By

Published : Oct 29, 2020, 7:44 AM IST

ದಾವಣಗೆರೆ/ಹಾವೇರಿ:ದಾವಣಗೆರೆಯಲ್ಲಿ 60 ಕೊರೊನಾ‌ ಪ್ರಕರಣಗಳು ದೃಢಪಟ್ಟರೇ, ಹಾವೇರಿಯಲ್ಲಿ 19 ಸೋಂಕಿತರು ಪತ್ತೆಯಾಗಿದ್ದು ಪ್ರತಿದಿನವೂ ಪ್ರಕರಣಗಳಲ್ಲಿ ಸಂಖ್ಯೆ ಇಳಿಮುಖ ಕಾಣ್ತಿವೆ.

ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,412 ಕ್ಕೇರಿದೆ. ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬುಧವಾರ 57 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ, ಶಿಗ್ಗಾವಿ ತಾಲೂಕಿನಲ್ಲಿ ತಲಾ 01, ಹಾವೇರಿ ರಾಣೆಬೆನ್ನೂರು ತಾಲೂಕಿನಲ್ಲಿ ತಲಾ 04, ಹಾನಗಲ್ -05,ಹಿರೇಕೆರೂರಿನಲ್ಲಿ ಇಬ್ಬರಿಗೆ ಕೊರೊನಾ ತಗುಲಿದೆ. ಜಿಲ್ಲೆಯಲ್ಲಿ 215 ಜನ ಹೋಂಐಸೋಲೇಷನ್​ನಲ್ಲಿದ್ದು, 61 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 20,578 ಕ್ಕೇರಿದೆ. ಹರಿಹರ ಪಟ್ಟಣದ ಹವಳದ ಬೀದಿಯ ನಿವಾಸಿ 66 ವರ್ಷದ ವೃದ್ಧ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದುವರೆಗೆ ಜಿಲ್ಲೆಯಲ್ಲಿ 255 ಮಂದಿ ಬಲಿಯಾಗಿದ್ದಾರೆ. ದಾವಣಗೆರೆ- 26, ಹರಿಹರ- 16, ಚನ್ನಗಿರಿ-7 ಹಾಗೂ ಹೊನ್ನಾಳಿಯಲ್ಲಿ -11 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. 90 ಜನರು‌ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗು 19,565 ಜನರು ಡಿಸ್ಚಾರ್ಜ್ ಆಗಿದ್ದಾರೆ‌. 1,030 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಪ್ರಸ್ತುತ 758 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details