ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಪುಟ್ಟ ಮಗುವನ್ನು ತೊಟ್ಟಿಲಲ್ಲಿರಿಸಿ ಬಾವಿಗಿಳಿಸೋ ಅಪಾಯಕಾರಿ ಹರಕೆ! - ದರ್ಗಾದಲ್ಲಿ ಅಪಾಯಕಾರಿ ಸಂಪ್ರದಾಯ

ಮಗುವನ್ನು ತೊಟ್ಟಿಲಲ್ಲಿಟ್ಟು ಅದನ್ನು ಬಾವಿಗಿಳಿಸಿ ಮೇಲಕ್ಕೆತ್ತುವ ವಿಚಿತ್ರ ಹರಕೆ ಪದ್ಧತಿಯೊಂದು ಹಾವೇರಿಯಲ್ಲಿ ನಡೆಯುತ್ತಿದೆ.

By

Published : Jun 16, 2020, 12:57 PM IST

ಶಿಗ್ಗಾಂವಿ (ಹಾವೇರಿ): ಮಗುವನ್ನು ತೊಟ್ಟಿಲಲ್ಲಿರಿಸಿ ಬಾವಿಯಲ್ಲಿ ಬಿಟ್ಟು ಬಾವಿ ನೀರು ಮುಟ್ಟಿಸುವ‌ ಮೂಲಕ ಹರಕೆ ತೀರಿಸುವ ವಿಚಿತ್ರ ಪದ್ಧತಿಯೊಂದು ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ದರ್ಗಾದಲ್ಲಿ ನಡೆಯುತ್ತಿದೆ.

ಪಟ್ಟಣದ ಹಜರತ್ ಫೀರ ಸಯ್ಯದ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ಇಂಥದ್ದೊಂದು ವಿಚಿತ್ರ ಪದ್ಧತಿ ನಡೆದುಕೊಂಡು ಬರುತ್ತಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ರೀತಿಯ ಹರಕೆ ತೀರಿಸುವ ದೃಶ್ಯಗಳು ಈಗ ವೈರಲ್ ಆಗಿವೆ. ಮಕ್ಕಳಾಗದವರು ದರ್ಗಾಕ್ಕೆ ಹರಕೆ ಹೊತ್ತು ಮಕ್ಕಳಾದ ನಂತರ ಅವರನ್ನು ಕರೆತಂದು ಈ ರೀತಿಯಾಗಿ ಹರಕೆ ತೀರಿಸುವುದು ವಾಡಿಕೆ.

ಸ್ವಲ್ಪ ಯಾಮಾರಿದರೂ ಮಗುವಿನ ಪ್ರಾಣಕ್ಕೆ ಅಪಾಯ!

ಮಕ್ಕಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಡುವಾಗ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ವಿಜ್ಞಾನ ಸಾಕಷ್ಟು ಬೆಳೆದಿದ್ರೂ ದರ್ಗಾದಲ್ಲಿ ಇಂಥ ಪದ್ಧತಿ ಇನ್ನೂ ನಡೆದುಕೊಂಡು ಬರುತ್ತಿರುವುದು ವಿಪರ್ಯಾಸ. ಹರಕೆ ತೀರಿಸೋ ನೆಪದಲ್ಲಿ ದರ್ಗಾದಲ್ಲಿ ನಡೆಯೋ ಈ ಸಂಪ್ರದಾಯ ನಮ್ಮಲ್ಲಿ ಇನ್ನೂ ಮೂಢನಂಬಿಕೆಗಳು ಜೀವಂತವಾಗಿವೆ ಅನ್ನೋದಕ್ಕೆ ಸಾಕ್ಷಿಯಾಗಿದೆ.

ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ:

ಹಲವಾರು ವರ್ಷಗಳಿಂದ ಈ ರೀತಿಯ ಕ್ರಿಯೆ ದರ್ಗಾದಲ್ಲಿ ನಡೆದುಕೊಂಡು ಬರುತ್ತಿದ್ದರೂ ತಾಲೂಕು ಮತ್ತು ಜಿಲ್ಲಾಡಳಿತ ಮೌನವಹಿಸಿದೆ.

ABOUT THE AUTHOR

...view details