ಹಾವೇರಿ:ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರ ಕೈ ಮತ್ತು ಕಾಲು ಕಟ್ಟಾಗಿದೆ. ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಈ ಘಟನೆ ನಡೆದಿದೆ.
ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರ ಕೈ, ಕಾಲು ತುಂಡು! ರೈಲ್ವೇ ನಿಲ್ದಾಣದಲ್ಲಿ ದಾರುಣ ಘಟನೆ - Cut the hand and foot
ರೈಲಿ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬರ ಕೈ ಮತ್ತು ಕಾಲು ತುಂಡಾದ ದಾರುಣ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಕೈಕಾಲು ಕಳೆದುಕೊಂಡ ವ್ಯಕ್ತಿಯನ್ನ ಹುಬ್ಬಳ್ಳಿಯ ಗಣೇಶಪೇಟೆ ನಿವಾಸಿ 37 ವರ್ಷದ ಸಲೀಂ ಎಂದು ಗುರುತಿಸಲಾಗಿದೆ.
ಕುಡಿತದ ಮತ್ತಿನಲ್ಲಿದ್ದ ಸಲೀಂ ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಸಲೀಂ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಹಾವೇರಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.