ಹಾವೇರಿ:ಕಳೆದ ವರ್ಷ ರಾಜ್ಯದಲ್ಲಿಯೇ ಅತಿಹೆಚ್ಚು ಮದ್ಯ ಮಾರಾಟವಾಗಿದ್ದ ಕೀರ್ತಿ ಜಿಲ್ಲೆಗೆ ಸಲ್ಲಿತ್ತು. ಆದರೆ ಈ ವರ್ಷ ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ಮೊರೆ ಹೋಗಿರುವುದರಿಂದ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ವರ್ಷ ವ್ಯಾಪಾರ ಕುಸಿತಗೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಸರ್ಕಾರದ ನಿಯಮಾವಳಿಗಳನ್ನು ಪಾಲಿಸುತ್ತಿರುವ ಮದ್ಯದಂಗಡಿ ಮಾಲೀಕರು, ಮುಂಜಾನೆ 6 ರಿಂದ 10 ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಕಳೆದ ಬಾರಿ ಜನದಟ್ಟಣೆ ಕಂಡಿದ್ದ ಹಾವೇರಿಯ ಹಲವು ಮಾಲೀಕರು ತಮ್ಮ ಮದ್ಯದಂಗಡಿ ಮುಂದೆ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಅವರ ನಿರೀಕ್ಷೆಯಂತೆ ಮದ್ಯಪಾನಿಗಳು ಅಂಗಡಿಗಳ ಕಡೆ ಸುಳಿಯುತ್ತಿಲ್ಲ ಎನ್ನಲಾಗಿದೆ.