ಕರ್ನಾಟಕ

karnataka

ETV Bharat / state

ದುಷ್ಕರ್ಮಿಗಳ ಕೃತ್ಯಕ್ಕೆ ನೆಲಕ್ಕುರುಳಿದ ಅಡಿಕೆ ಮರಗಳು... ಕಂಗಾಲಾದ ರೈತ

ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಫಸಲಿಗೆ ಬಂದಿದ್ದ ಐದು ವರ್ಷದ 31 ಅಡಿಕೆ ಮರಗಳನ್ನು ನೆಲಸಮಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.

ರೈತ ಷಣ್ಮುಖಪ್ಪ

By

Published : Jun 15, 2019, 3:27 AM IST

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದ ಷಣ್ಮುಖಪ್ಪ ಮಿಶ್ರ ಬೇಸಾಯ ಮಾಡಿಕೊಂಡು ಅಧಿಕ ಅದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು ಎರಡು ಎಕರೆ ತೋಟದಲ್ಲಿ 500 ಅಡಿಕೆ ಮರಗಳನ್ನ ಇವರು ನೆಟ್ಟಿದ್ದರು.

ಈ ಅಡಿಕೆ ಮರಗಳು ಈ ಬಾರಿ ಫಸಲು ಬಿಡುವ ಹಂತದಲ್ಲಿದ್ದವು. ಆದರೆ ಕಳೆದ ರಾತ್ರಿ ಷಣ್ಮುಖಪ್ಪ ಅವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 31 ಅಡಿಕೆ ಗಿಡಗಳನ್ನು ನೆಲಸಮಗೊಳಿಸಿದ್ದಾರೆ. ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರಗಳು ಮಕಾಡೆ ಮಲಗಿರುವುದನ್ನು ಕಂಡ ಷಣ್ಮುಖಪ್ಪ ಅವರಿಗೆ ದಿಕ್ಕುತೋಚದಂತಾಗಿದೆ.

ದುಷ್ಕರ್ಮಿಗಳಿಂದ 31 ಅಡಿಕೆ ಗಿಡಗಳ ನೆಲಸಮ

ಹಿರೂರು ಸೇರಿದಂತೆ ಸುತ್ತಮುತ್ತಲು ಗ್ರಾಮಗಳಲ್ಲಿ ಸಂಭಾವಿತ ಎಂದೆನಿಸಿಕೊಂಡಿದ್ದ ಷಣ್ಮುಖಪ್ಪ ಅವರಿಗೆ ಈ ರೀತಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲ ವರ್ಷಗಳ ಹಿಂದೆ ಮಾವಿನಮರಗಳನ್ನು ಸಹ ಯಾರೋ ದುಷ್ಕರ್ಮಿಗಳು ಇದೇ ರೀತಿ ಕೊಚ್ಚಿ ಹಾಕಿದ್ದರು. ಈ ರೀತಿ ಗ್ರಾಮದಲ್ಲಿ ವಿಕೃತಿ ಮೆರೆಯುವವರು ಅಧಿಕವಾಗುತ್ತಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸಿ ತಕ್ಕ ಶಾಸ್ತಿ ಮಾಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ರೈತ ಷಣ್ಮುಖಪ್ಪ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ ಮಾಲದಂಡಿ, ಡಿವೈಸ್ಪಿ ವಿಜಯಕುಮಾರ್, ಸಿಪಿಐ ಚಿದಾನಂದ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಆರೋಪಿಗಳ ಸಾಕ್ಷ್ಯಗಳನ್ನು ಕಲೆಹಾಕಿದ್ದು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಘಟನೆಯಲ್ಲಾದರು ಪೊಲೀಸರು ಆರೋಪಿಗಳನ್ನ ಬಂಧಿಸಿ ಹಿರೂರು ಗ್ರಾಮಸ್ಥರ ಆತಂಕವನ್ನ ದೂರ ಮಾಡಬೇಕಿದೆ.

For All Latest Updates

TAGGED:

ABOUT THE AUTHOR

...view details