ಹಾವೇರಿ: ವಾಹನಕ್ಕೆ ಅಡ್ಡ ಬಂದ ಎಮ್ಮೆಗಳನ್ನ ತಪ್ಪಿಸಲು ಹೋಗಿ ಕ್ರೂಸರ್ ಕೆರೆಗೆ ಬಿದ್ದ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೆರೆ ಗ್ರಾಮದ ಬಳಿ ನಡೆದಿದೆ. ಕ್ರೂಸರ್ ಕೆರೆಯಲ್ಲಿ ಬಿದ್ದಿದ್ದನ್ನ ಗಮನಿಸಿದ ಸ್ಥಳೀಯರು ವಾಹನದಲ್ಲಿದ್ದ ಚಾಲಕನನ್ನ ರಕ್ಷಿಸಿದ್ದಾರೆ.
ಕ್ರೂಸರ್ಗೆ ಅಡ್ಡ ಬಂದ ಎಮ್ಮೆಗಳು: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ವಾಹನ
ಶಿಗ್ಗಾವಿ ತಾಲೂಕಿನ ಕೋಣನಕೆರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಕೆರೆಗೆ ಬಿದ್ದ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ವಾಹನ
ಶ್ಯಾಬಳ ಗ್ರಾಮದಿಂದ ಬಂದ ಕ್ರೂಸರ್ ಕೋಣನಕೆರೆ ಕೆರೆ ದಂಡೆಯ ರಸ್ತೆ ಮೇಲೆ ಸಾಗುತ್ತಿದ್ದ ವೇಳೆ ಎಮ್ಮೆಗಳು ಅಡ್ಡ ಬಂದಿವೆ. ಅವುಗಳಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋದ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಜೊತೆಗೆ ಕೆರೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ವಾಹನ ಕೆರೆಯೊಳಗೆ ಬಿದ್ದಿದೆ.
ಗಾಯಗೊಂಡಿದ್ದ ಚಾಲಕನನ್ನ ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.