ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ವಿಚಿತ್ರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನ ಕಮಲಾಪುರ ಗ್ರಾಮದ ಈರಪ್ಪ ಕುರಿ (62)ಯವರು ಎಂದು ಗುರುತಿಸಲಾಗಿದೆ. ಕಳೆದ 30 ರಂದು ಈರಪ್ಪ ಮನೆಯಿಂದ ಸಮುದಾಯ ಭವನಕ್ಕೆ ಮಲಗಲು ತೆರಳಿದ್ದರು ಎನ್ನಲಾಗಿದೆ.
ಎರಡು ದಿನ ಸಂಬಂಧಿಕರು ಸೇರಿದಂತೆ ಬೇರೆ ಊರಿಗೆ ತೆರಳಿರಬಹುದು ಎಂದು ಈರಪ್ಪ ಕುಟುಂಬದವರು ವಿಚಾರಣೆ ನಡೆಸಿದ್ದಾರೆ. ಅಲ್ಲಿ ಈರಪ್ಪ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ಕುಟುಂಬದವರು ರಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈರಪ್ಪ ಕಾಣೆಯಾದ ನಂತರ ಅವನು ಈ ಹಿಂದೆ ಪದೇ ಪದೆ ಹೋಗುತ್ತಿದ್ದ ಗದಿಗೆಪ್ಪ ಸಣ್ಣತಾಯಿ ಮನೆಯವರ ಮೇಲೆ ಈರಪ್ಪನ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದರು. ಈರಪ್ಪ ನಾಪತ್ತೆಯಾಗಿ ಮೂರೇ ದಿನಕ್ಕೆ ಗದಿಗೆಪ್ಪ ಸಣ್ಣತಾಯಿ ಮನೆಯವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು.
ಕೊಳೆತ ಶವದ ವಾಸನೆ : ಈ ಕುರಿತಂತೆ ಈರಪ್ಪ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಗದಿಗೆಪ್ಪ ಸಣ್ಣತಾಯಿಯವರ ಮನೆ ಹಿಂದೆ ನೋಡಿದಾಗ ಕೊಳೆತ ಶವದ ವಾಸನೆ ಬಂದಿತ್ತು.