ಕರ್ನಾಟಕ

karnataka

ETV Bharat / state

ಕಾಗೆಗಳ ಸರಣಿ ಸಾವು... ಕೊರೊನಾ ಭೀತಿಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಶಾಕ್​

ಕೊರೊನಾ ವೈರಸ್​ ಭೀತಿ ರಾಜ್ಯದ ಜನರನ್ನು ಆತಂಕಕ್ಕೀಡುಮಾಡಿರುವ ಬೆನ್ನಲ್ಲೇ ಇದೀಗ ಮತ್ತೊಂದು ಅತಂಕ ಶುರುವಾಗಿದೆ. ಹಾವೇರಿ ಜಿಲ್ಲೆಯ ಕುಳೇನೂರು ಗ್ರಾಮದಲ್ಲಿ ಕಾಗೆಗಳ ಸರಣಿ ಸಾವು ಜನರನ್ನು ಮತ್ತಷ್ಟು ಭಯ ಮೂಡಿಸಿದೆ.

crow death in haveri kulenuru
ಹಾವೇರಿ ಕಾಗೆಗಳ ಸಾವು

By

Published : Mar 22, 2020, 9:38 PM IST

ಹಾವೇರಿ: ರಾಜ್ಯದಲ್ಲಿ ಕೊರೊನಾ ವೈರಸ್​, ಹಕ್ಕಿ ಜ್ವರ ಕಾಣಿಸಿಕೊಂಡು ಅವಾಂತರ ಸೃಷ್ಟಿಸುತ್ತಿರುವ ಬೆನ್ನಲ್ಲೇ ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಇದೀಗ ಕಾಗೆಗಳು ಸತ್ತು ಬೀಳುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ 20ಕ್ಕೂ ಅಧಿಕ ಕಾಗೆಗಳು ಸಾವನ್ನಪ್ಪಿವೆ. ಸತ್ತ ಕಾಗೆಗಳನ್ನು ತಿಂದ ನಾಯಿಗಳು ಗೂರಲಾರಂಭಿಸಿವೆ(ಕೆಮ್ಮುತ್ತಿವೆ). ಇದರಿಂದ ಮತ್ಯಾವುದಾದರೂ ಹೊಸ ರೋಗ ಬಂತಾ ಅಂತ ಗ್ರಾಮದ ಜನರು ಪಶು ವೈದ್ಯಾಧಿಕಾರಿಗಳಿಗೆ ಮತ್ತು ಆರೋಗ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ.

ಕಾಗೆಗಳ ಸಾವು, ಜನರಿಗೆ ಮತ್ತೊಂದು ಆತಂಕ

ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿ ವಿಷ ಪದಾರ್ಥ ಸೇವನೆ ಅಥವಾ ಬಿಸಿಲಿನ ತಾಪಮಾನಕ್ಕೆ ಕಾಗೆಗಳು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸತ್ತ ಕಾಗೆಗಳ ಮಾದರಿ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಾರೆ ಕೊರೊನಾ ಭೀತಿಯಲ್ಲಿರುವ ಜನ ಸದ್ಯ ಕಾಗೆಗಳ ಸಾವಿನಿಂದ ಭಯಭೀತರಾಗಿದ್ದು, ಆದಷ್ಟೂ ಬೇಗ ಜನರ ಆತಂಕ ದೂರ ಮಾಡಬೇಕಿದೆ.

ABOUT THE AUTHOR

...view details