ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಧಾರಾಕಾರ ಮಳೆ; ಕೆರೆ ಕೋಡಿ ಬಿದ್ದು ಬೆಳೆ ಹಾನಿ - ತುಂಗಭದ್ರಾ ನದಿ

ಹಾನಗಲ್ ತಾಲೂಕಿನ ಶ್ಯಾಡಗುಪ್ಪಿಯಲ್ಲಿ ಮಳೆ ನೀರಿನಿಂದಾಗ ಕೆರೆ ಕೋಡಿ ಬಿದ್ದಿದೆ. ಪರಿಣಾಮ ರೈತರ ಜಮೀನಿಗೆ ನೀರು ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ.

ಕೆರೆ ಕೋಡಿ ಬಿದ್ದು ಬೆಳೆ ಹಾನಿ

By

Published : Aug 9, 2019, 9:56 AM IST

ಹಾವೇರಿ: ಎಡೆಬಿಡದೆ ಸುರಿಯುತ್ತಿರುವ ಮಳೆಯ ರುದ್ರನರ್ತನಕ್ಕೆ ಕುಮದ್ವತಿ, ತುಂಗಭದ್ರಾ, ವರದಾ ಹಾಗೂ ಧರ್ಮಾ ನದಿಗಳು ಹುಚ್ಚೆದ್ದು ಕುಣಿಯುತ್ತಿವೆ.

ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿಯಲ್ಲಿ ಮಳೆಯ ನೀರಿನಿಂದಾಗ ಕೆರೆ ಕೋಡಿ ಬಿದ್ದಿದೆ. ಪರಿಣಾಮ ಕೆರೆಯ ನೀರು ರೈತರ ಜಮೀನಿಗೆ ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳಿಗೆ ತೊಂದರೆಯಾಗಿದೆ.

ಕೆರೆ ಕೋಡಿ ಬಿದ್ದು ಬೆಳೆ ಹಾನಿ

ಶೇಂಗಾ, ಮೆಣಸಿನಕಾಯಿ, ಸೋಯಾಬೀನ್, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಜಮೀನಿಗೆ ನೀರು ನುಗ್ಗಿದ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆ.

ABOUT THE AUTHOR

...view details