ಕರ್ನಾಟಕ

karnataka

ETV Bharat / state

'ಊಟಕ್ಕೆ, ಆಶ್ರಯಕ್ಕೆ ವ್ಯವಸ್ಥೆ ಮಾಡದಿದ್ರೆ, ಅಧಿಕಾರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೇವೆ' - ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಅಲೆಮಾರಿ ಕುಟುಂಬಗಳು

ದೇಶದಲ್ಲಿ ಜಾರಿಗೆ ತಂದಿರುವ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಾವೇರಿಯ ಅಲೆಮಾರಿ ಕುಟುಂಬಗಳನ್ನು ಎಲ್ಲ ಗ್ರಾಮಗಳೂ ಒಳಗೆ ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ಆ ಕುಟುಂಬಗಳು ಒಪ್ಪೊತ್ತಿಗೂ ಊಟವಿಲ್ಲದೇ ದಿನ ದೂಡುತ್ತಿವೆ.

The nomadic family
ಅಲೆಮಾರಿ ಕುಟುಂಬಗಳು

By

Published : Mar 30, 2020, 6:05 PM IST

ಹಾವೇರಿ: ಹಲವು ವರ್ಷಗಳಿಂದ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಸುತ್ತಮುತ್ತ ಟೆಂಟ್​ ಹಾಕಿಕೊಂಡು ವಾಸಿಸುತ್ತಿದ್ದ 20ಕ್ಕೂ ಅಧಿಕ ಅಲೆಮಾರಿ ಕುಟುಂಬಗಳಿಗೆ ಈಗ ತೀವ್ರ ಸಂಕಷ್ಟ ಎದುರಾಗಿದೆ.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಲೆಮಾರಿಗಳನ್ನು ಬೇರೆ ಗ್ರಾಮಗಳ ಜನರು ಊರಿಗೆ ಸೇರಿಸಿಕೊಳ್ಳುತ್ತಿಲ್ಲ. ಊರಲ್ಲಿ ಟೆಂಟ್​ ಹಾಕಿದರೆ, ಅದನ್ನು ಕಿತ್ತಿಸಿ ಬೇರೆ ಕಡೆಗೆ ಹೋಗುವಂತೆ ಹೇಳುತ್ತಿದ್ದಾರೆ. ಹೀಗಾಗಿ ಕೆಲಸ, ಊಟಕ್ಕೆ ದಿನಸಿ, ಕುಡಿಯಲು ನೀರೂ ಇಲ್ಲದೆ ಪರದಾಡುತ್ತಿದ್ದಾರೆ.

ಅಲೆಮಾರಿ ಕುಟುಂಬಗಳ ಅಳಲು

ಎಳೆ ಮಕ್ಕಳನ್ನು ಹೊಂದಿರುವ ಈ ಅಲೆಮಾರಿ ಕುಟುಂಬಗಳಿಗೆ ಮಹಾಮಾರಿ ಕೊರೊನಾ ಇನ್ನಿಲ್ಲದ ಸಂಕಟ ತಂದೊಡ್ಡಿದೆ. ಸುಮಾರು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ನಮ್ಮ ಪರಿಸ್ಥಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗೊತ್ತಿದೆ. ಆದರೆ, ಯಾರೂ ನಮಗೆ ಎರಡು ಹೊತ್ತು ಊಟ, ವಾಸಕ್ಕೆ ಆಶ್ರಯ ಕೊಡಿಸುತ್ತಿಲ್ಲ ಎಂದು ಸಮಸ್ಯೆಗಳ ರಾಶಿಯನ್ನು ಹೇಳಿಕೊಂಡ ಅಲೆಮಾರಿ ಜನ.

ಹೀಗಾದರೆ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು.

ABOUT THE AUTHOR

...view details