ಹಾವೇರಿ:ಕೊರೊನಾ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಜನ ಸೇರುವ ಜಾತ್ರೆ, ಸಂತೆ ಸೇರಿದಂತೆ ಹಲವು ಧಾರ್ಮಿಕ ಸಂಪ್ರದಾಯಗಳನ್ನು ರದ್ದುಪಡಿಸಲಾಗಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮ ಇದ್ದರೂ ಸಹ ಕರ್ಜಗಿಯಲ್ಲಿ ಬ್ರಹ್ಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಬಂಡಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಹಾವೇರಿ ಜಿಲ್ಲಾಡಳಿತಕ್ಕೇ ಸೆಡ್ಡು: ಕರ್ಜಗಿಯಲ್ಲಿ ಭರ್ಜರಿ ಬಂಡಿ ಓಟದ ಸ್ಪರ್ಧೆ! - ಕರ್ಜಗಿ
ಹಾವೇರಿ ಸಮೀಪದ ಕರ್ಜಗಿಯಲ್ಲಿ ಜಿಲ್ಲಾಡಳಿತದ ವಿರೋಧದ ನಡುವೆಯೂ ಬ್ರಹ್ಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಬಂಡಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕಿಕ್ಕಿರಿದ್ದು ಸೇರಿದ್ದ ಜನರ ನಡುವೆ ಬಂಡಿ ಓಟದಲ್ಲಿ ಪಾಲ್ಗೊಂಡಿದ್ದವರು ಹರುಪಿನಿಂದ ಸಂಭ್ರಮಿಸಿದರು. ಪ್ರತಿವರ್ಷ ಮೂರು ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಸಂಪ್ರದಾಯವನ್ನ ನಿನ್ನೆ ಆಚರಿಸಲಾಯಿತು. ಕಿಕ್ಕಿರಿದು ಸೇರಿದ್ದ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಬೆರಳೆಣಿಕೆ ಜನ ಮಾತ್ರ ಮಾಸ್ಕ್ ಹಾಕಿದ್ದು ಬಿಟ್ಟರೇ ಉಳಿದವರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಲ್ಲ ಎನ್ನಲಾಗಿದೆ.
ಈ ಕುರಿತಂತೆ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಆದರೆ ತಹಶೀಲ್ದಾರ್ ಜಾತ್ರೆ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಾಲೂಕಾಡಳಿತ ವಿರೋಧದ ನಡುವೆ ಕರ್ಜಗಿ ಗ್ರಾಮಸ್ಥರು ನಡೆಸಿರುವ ಈ ಬಂಡಿ ಓಟ ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿದೆ.