ಹಾನಗಲ್ (ಹಾವೇರಿ): ಜಿಲ್ಲೆಯ ಹಾನಗಲ್ ತಹಶೀಲ್ದಾರ್ ಕಚೇರಿ ಎದುರು ತಾಲೂಕಿನ ಮಾಸನಕಟ್ಟಿ ಗ್ರಾಮದ ದ್ಯಾಮವ್ವ ಬಾರಿಗಿಡದ ಎಂಬ ದಂಪತಿ ಮನೆ ನಿರ್ಮಿಸಿ ಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ಸಂಪೂರ್ಣ ಮನೆ ನೆಲಕ್ಕುರುಳಿ ಸೂರು ಕಳೆದುಕೊಂಡಿದ್ದರು. ಇದೀಗ, ಮನೆಯಿಲ್ಲದೇ ಬೀದಿಯಲ್ಲಿ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂರು ನಿರ್ಮಿಸಿಕೊಡುವಂತೆ ಆಗ್ರಹಿಸಿ ದಂಪತಿಯಿಂದ ಉಪವಾಸ ಸತ್ಯಾಗ್ರಹ
ಕಳದ ವರ್ಷ ಸುರಿದ ಮಳೆಯಿಂದಾಗಿ ಮನೆ ಸಂಪೂರ್ಣ ನೆಲಸಮವಾಗಿತ್ತು. ಇದಾಗಿ ವರ್ಷ ಕಳೆದರೂ ಹೊಸ ಮನೆ ನಿರ್ಮಾಣ ಕುರಿತು ಅಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ದಂಪತಿ ಪ್ರತಿಭಟಿಸಿದ್ದಾರೆ. ಸೂಕ್ತ ನ್ಯಾಯ ಸಿಗುವ ವರೆಗೂ ಪ್ರತಿಭಟಿಸುವುದಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಪಟ್ಟು ಹಿಡಿದಿದ್ದಾರೆ.
ಸೂರು ನಿರ್ಮಿಸಿಕೊಡುವಂತೆ ದಂಪತಿಯಿಂದ ಉಪವಾಸ ಸತ್ಯಾಗ್ರಹ
ಆದ್ದರಿಂದ ನಮಗೆ ಸೂರು ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಯಾರೋ ಅಧಿಕಾರಿಗಳು ಮಾಡಿದ ತಪ್ಪಿನಿಂದ ನಾವು ಇದೀಗ ಬೀದಿಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ನಮಗೆ ಸೂಕ್ತ ರೀತಿಯ ಸೌಲಭ್ಯ ಕಲ್ಪಿಸುವವರೆಗೂ ನಾವು ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.