ಹಾವೇರಿ:ಮದುವೆ ಮೊದಲ ವಾರ್ಷಿಕೋತ್ಸವವನ್ನ ದಂಪತಿಗಳು ಕೇಕ್ ಕಟ್ ಮಾಡುವ ಮೂಲಕ ಆಚರಿಸುವದನ್ನ ಕೇಳಿದ್ದೇವೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ವಾರ್ಷಿಕೋತ್ಸವ ಆಚರಿಸುತ್ತಾರೆ. ಅದರಲ್ಲೂ ಮದುವೆಯಾಗಿ ದಶಕವಾದರೆ ಸಾಕು ದಂಪತಿಗಳು ವೈವಿಧ್ಯಮಯವಾಗಿ ಮದುವೆ ವಾರ್ಷಿಕೋತ್ಸವ ಆಚರಿಸುತ್ತಾರೆ. ಆದರೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿ ದಂಪತೆ 15 ನೇ ವಾರ್ಷಿಕೋತ್ಸವನ್ನ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ನೇತ್ರದಾನ ವಾಗ್ದಾನ ಮಾಡಿ ಮದುವೆ ವಾರ್ಷಿಕೋತ್ಸವ ಆಚರಿಸಕೊಂಡ ದಂಪತಿ ರಟ್ಟಿಹಳ್ಳಿಯ ಮಾಲತೇಶ್ ಮತ್ತು ಪವಿತ್ರ ತಮ್ಮ ಮದುವೆಯ 15ನೇ ವಾರ್ಷಿಕೋತ್ವವನ್ನ ವಿಭಿನ್ನವಾಗಿ ಆಚರಿಸುವ ಗಮನ ಸೆಳೆದಿದ್ದಾರೆ. ಈ ದಂಪತಿ ಮದುವೆ ವಾರ್ಷಿಕೋತ್ಸವವನ್ನ ನೇತ್ರದಾನ ವಾಗ್ದಾನ ಮಾಡುವ ಮೂಲಕ ಆಚರಿಸಿದ್ದಾರೆ.
ನೇತ್ರದಾನ ವಾಗ್ದಾನ ಮಾಡಿ ಮದುವೆ ವಾರ್ಷಿಕೋತ್ಸವ ಆಚರಿಸಕೊಂಡ ದಂಪತಿ ಫೈಲ್ವಾನನಾಗಿ ಕೆಲಸ ಮಾಡುವ ಮಾಲತೇಶ ಮತ್ತು ಗೃಹಿಣೆಯಾಗಿರುವ ಪವಿತ್ರ ಅಂತರ್ಜಾಲದಲ್ಲಿ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಇತರ ದಂಪತಿಗಳಿಗೆ ಮಾದರಿಯಾಗಿದ್ದಾರೆ. ಜೀವನ ಸಾರ್ಥಕತೆ ವೆಬ್‌ಸೈಟ್‌ನಲ್ಲಿ ಈ ದಂಪತಿ ನೇತ್ರದಾನ ವಾಗ್ದಾನಪತ್ರಕ್ಕೆ ಸಹಿ ಮಾಡಿದ್ದಾರೆ.
ನೇತ್ರದಾನ ವಾಗ್ದಾನ ಮಾಡಿ ಮದುವೆ ವಾರ್ಷಿಕೋತ್ಸವ ಆಚರಿಸಕೊಂಡ ದಂಪತಿ ಮರಣ ನಂತರ ಕಣ್ಣುಗಳು ಮಣ್ಣುಪಾಲಾಗುತ್ತವೆ. ಆದರೆ ನೇತ್ರದಾನ ಮಾಡುವುದರಿಂದ ಅಂಧರ ಬಾಳಿಗೆ ಬೆಳಕಾಗಬಹುದು ಎನ್ನುತ್ತಾರೆ ಮಾಲತೇಶ. ಮಾಲತೇಶ ಮೊದಲು ಈ ವಿಷಯವನ್ನ ಪವಿತ್ರಾರಿಗೆ ತಿಳಿಸಿದ್ದಾರೆ. ಪತಿಯ ಇಚ್ಛೆಗೆ ಬೆಂಬಲ ವ್ಯಕ್ತಪಡಿಸಿರುವ ಪವಿತ್ರಾ ತಾವು ಸಹ ವಾಗ್ದಾನ ಪತ್ರಕ್ಕೆ ಸಹಿ ಮಾಡುವ ಮೂಲಕ ಮದುವೆ ವಾರ್ಷಿಕೋತ್ಸವದ ಸಾರ್ಥಕತೆ ಮೆರೆದಿದ್ದಾರೆ.
ನೇತ್ರದಾನ ವಾಗ್ದಾನ ಮಾಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ