ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ ಶಂಕೆ: ಹಾವೇರಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣು - ಕೌಟುಂಬಿಕ ಕಲಹ ಹಿನ್ನೆಲೆ

ತಾಲೂಕಿನ ಕಂಚಾರಗಟ್ಟಿ ಗ್ರಾಮದ ಬಳಿ ತುಂಗಾಭದ್ರಾ ನದಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಂಪತಿ ಆತ್ಮಹತ್ಯೆಗೆ ಶರಣು
Couple committed suicide at Haveri

By

Published : Jan 18, 2020, 4:28 PM IST

ಹಾವೇರಿ :ತುಂಗಭದ್ರಾ ನದಿಗೆ ಜಿಗಿದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಬಳಿ ನಡೆದಿದೆ.

ದಂಪತಿ ಆತ್ಮಹತ್ಯೆಗೆ ಶರಣು

ಪ್ರಕಾಶ್​ ನಾಯಕ (32) ಮತ್ತು ಭಾರತಿ ಬಾಯಿ (25) ಮೃತ ದಂಪತಿ.

ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮೂಲದವರಾಗಿದ್ದು, ಕಬ್ಬು ಕಟಾವು ಮಾಡುವ ಕೆಲಸಕ್ಕಾಗಿ ತಾಲೂಕಿಗೆ ಬಂದಿದ್ದರು ಎಂಬ ಮಾಹಿತಿ ದೊರೆತಿದೆ.ಕೌಟುಂಬಿಕ ಕಲಹದಿಂದ ಮನನೊಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪತಿ-ಪತ್ನಿ ಶವಗಳು ನದಿಯಲ್ಲಿ ಪತ್ತೆಯಾಗಿವೆ.

ಘಟನಾ ಸ್ಥಳಕ್ಕೆ ಗುತ್ತಲ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details