ಹಾವೇರಿ:ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯ ನಂತರ 14 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಮೂವರು ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ.
ಈ 14 ಪ್ರಕರಣಗಳ ಮೂಲ ಮಹಾರಾಷ್ಟ್ರ. ಮೊದಲ ಆರು ಸೋಂಕಿತರ ಮೂಲ ಮುಂಬೈ ಆಗಿದ್ದರೆ ನಂತರದ 8 ಜನರ ಮೂಲ ಥಾಣಾದ ಪುಂಡವಾಡಾದ ಕೊರಚೆ ಪ್ರದೇಶ. ಮೇ 4ರಿಂದ ಮೇ 30 ರವರೆಗೆ ಜಿಲ್ಲೆಯಲ್ಲಿ 14 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಲಾಕ್ಡೌನ್ ಇದ್ದಾಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.
ಹೀಗಾಗಿ ಜಿಲ್ಲೆಯ ಜಿಲ್ಲಾಡಳಿತ ಮುಜಾಗ್ರತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು,ಜಿಲ್ಲಾಡಳಿತ ಬೇರೆ ರಾಜ್ಯದಿಂದ ಬರುವವರನ್ನ ಹಾಗೂ ಕಳ್ಳದಾರಿಯಲ್ಲಿ ಬರುವವರನ್ನ ಕಂಡು ಹಿಡಿದು ಕ್ವಾರಂಟೈನ್ ಮಾಡಬೇಕು. ಮುಂಜಾಗೃತಾ ಕ್ರಮಗಳನ್ನ ಕೈಗೊಂಡು ಜಿಲ್ಲೆಯಲ್ಲಿನ ಕೊರೊನಾ ಪಾಸಿಟಿವ್ ಸಂಖ್ಯೆಯನ್ನ ಕಡಿಮೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇದೇ 17 ರಂದು ಮಹಾರಾಷ್ಟ್ರದ ಥಾಣಾ ಜಿಲ್ಲೆಯ ಪುಂಡವಾಡಾದ ಕೊಳಚೆ ಪ್ರದೇಶದಿಂದ 89 ಜನರ ತಂಡ ಆಗಮಿಸಿದೆ. ಅದರಲ್ಲಿ 8 ಜನರ ರಿಪೋರ್ಟ್ ಪಾಸಿಟಿವ್ ಬಂದಿದೆ. ಉಳಿದಂತೆ 59 ಜನರ ವರದಿ ನೆಗಟಿವ್ ಬಂದಿದ್ದು,ಇನ್ನು 22 ಜನರ ವರದಿ ಬರಬೇಕಿದೆ. 22 ಜನರ ವರದಿ ಬಂದ ಬಳಿಕ ಜಿಲ್ಲೆಯ ಕೊರೊನಾದ ಸ್ಪಷ್ಟ ಚಿತ್ರಣ ಸಿಗಲಿದೆ.