ಕರ್ನಾಟಕ

karnataka

ETV Bharat / state

ಕಾನ್​ಸ್ಟೇಬಲ್​​ಗೆ ಕೊರೊನಾ ಸೋಂಕು: ಬ್ಯಾಡಗಿ ತಹಶೀಲ್ದಾರ್ ಕಚೇರಿ ಸೀಲ್​ಡೌನ್ - corona lastest news

ಹಾವೇರಿ ಜಿಲ್ಲೆಯ ಬ್ಯಾಡಗಿ ಕಾನ್​ಸ್ಟೇಬಲ್​ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರ ಟ್ರಾವೆಲ್ ಹಿಸ್ಟರಿಯನ್ನು ನೋಡಿದಾಗ ಅವರು ತಹಶೀಲ್ದಾರ್​​ ಕಚೇರಿಗೆ ಭೇಟಿ ನೀಡಿದ್ದಾರೆ. ಹಾಗಾಗಿ ತಹಶೀಲ್ದಾರ್​ ಕಚೇರಿಯನ್ನು ಸೀಲ್​ಡೌನ್​ ಮಾಡಲಾಗಿದೆ.

Badagi Tahsildar office was seal down
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ

By

Published : Jun 15, 2020, 11:00 PM IST

ಹಾವೇರಿ:ಬ್ಯಾಡಗಿಯ ಪೊಲೀಸ್​ ಕಾನ್​ಸ್ಟೇಬಲ್​​ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢವಾಗಿದೆ. ಈ ಹಿನ್ನೆಲೆ ತಹಶೀಲ್ದಾರ್​ ಕಚೇರಿಯನ್ನು ಸೀಲ್​ಡೌನ್​ ಮಾಡಲಾಗಿದೆ.

ಕಾನ್​ಸ್ಟೇಬಲ್ ಟ್ರಾವೆಲ್ ಹಿಸ್ಟರಿಯನ್ನು ನೋಡಿದಾಗ ಅವರು ತಹಶೀಲ್ದಾರ್​​ ಕಚೇರಿಗೆ ಭೇಟಿ ನೀಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಬ್ಯಾಡಗಿ ತಹಶೀಲ್ದಾರ್ ಕಚೇರಿಯನ್ನು ಸೀಲ್​ಡೌನ್ ಮಾಡುವಂತೆ ಆದೇಶಿಸಿದ್ದಾರೆ.

ಮುಂದಿನ ಆದೇಶ ಬರುವವರೆಗೆ ಕಚೇರಿ ತೆರೆಯದಂತೆ ಸೂಚಿಸಿದ್ದಾರೆ. ಅಲ್ಲದೇ ತಹಶೀಲ್ದಾರ್ ಸೇರಿದಂತೆ ಕಚೇರಿಯ ಸಿಬ್ಬಂದಿಗೆ ರಜೆ ನೀಡಿ ಹೋಮ್​​ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ತಹಶೀಲ್ದಾರ್ ಹುದ್ದೆಗೆ ಪ್ರಭಾರಿಯಾಗಿ ಹಾವೇರಿ ತಹಶೀಲ್ದಾರ್ ಶಂಕರ್ ಅವರನ್ನ ನಿಯೋಜನೆ ಮಾಡಲಾಗಿದೆ. ಶಂಕರ್ ಬ್ಯಾಡಗಿ ಪ್ರವಾಸಿ ಮಂದಿರದಿಂದ ಮಂಗಳವಾರದಿಂದ ಕಾರ್ಯನಿರ್ವಹಿಸಲಿದ್ದಾರೆ.

ABOUT THE AUTHOR

...view details