ಕರ್ನಾಟಕ

karnataka

ETV Bharat / state

ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ, ನಂತರ ವಯಸ್ಸಿನ ಅನುಸಾರ ವಿತರಣೆ: ಬಸವರಾಜ್ ಬೊಮ್ಮಾಯಿ - ಬಿ.ಡಿ. ಹಿರೇಮಠ ಪ್ರತಿಭಟನೆ

ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡುತ್ತೇವೆ. ನಂತರ ವಯೋಮಾನದ ಅನುಸಾರ ಲಸಿಕೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಟ್ಟಿಹಳ್ಳಿಯಲ್ಲಿ ತಿಳಿಸಿದರು.

-home-minister-basavaraj-bommayi
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Dec 16, 2020, 8:34 PM IST

Updated : Dec 16, 2020, 10:20 PM IST

ಹಾವೇರಿ:ಕೊರೊನಾ ಲಸಿಕೆ ಬರುತ್ತಿದ್ದಂತೆ ಮೊದಲು ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲಾಗುವುದು. ನಂತರ ವಯೋಮಾನದ ಅನುಸಾರ ಲಸಿಕೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಫೆಬ್ರವರಿ ತಿಂಗಳ ಆರಂಭದ ವೇಳೆಗೆ ಕೊರೊನಾ ಲಸಿಕೆ ನೀಡುವುದು ಬಹುತೇಕ ಖಚಿತ. ಲಸಿಕೆ ನೀಡುವ ಜೊತೆ ಜೊತೆಗೆ ಅದರ ಪರಿಣಾಮಗಳ ಬಗ್ಗೆ ಸಹ ಗಮನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಬಸವರಾಜ್ ಬೊಮ್ಮಾಯಿ, ಗೃಹ ಸಚಿವ

ರೈತರ ಪರವಾಗಿ ಹೋರಾಟಕ್ಕೆ ಕುಳಿತಿರುವ ಬಿ.ಡಿ.ಹಿರೇಮಠ ಜೊತೆ ಮಾತುಕತೆ ನಡೆಸಿ ಮಾತನಾಡಿದ ಅವರು, ಹಿರೇಮಠ ತಮ್ಮ ಕೋರಿಕೆಗೆ ಸ್ಪಂದಿಸಿದ್ದಾರೆ. ಅವರ ಮೊದಲ ಹಂತದ ಬೇಡಿಕೆಯನ್ನು ಈಡೇರಿಸಿದ್ದೇವೆ. ಅವರ ಎರಡನೇ ಬೇಡಿಕೆ ಕುರಿತಂತೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿ ಅಂತಿಮ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಬಿ.ಡಿ. ಹಿರೇಮಠ ತಮ್ಮ ಹೋರಾಟದಿಂದ ಹಿಂದೆ ಸರಿಯುವ ವಿಶ್ವಾಸವಿದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಕೋವಿಡ್ ಸೋಂಕಿತ ಎರಡು ವರ್ಷದ ಬಾಲಕ ಆಸ್ಪತ್ರೆಯಲ್ಲೇ ಭಾಂಗ್ರಾ ಡ್ಯಾನ್ಸ್​..

Last Updated : Dec 16, 2020, 10:20 PM IST

ABOUT THE AUTHOR

...view details