ಹಾವೇರಿ: ಉಸಿರಾಟದ ಸಮಸ್ಯೆ ಹಿನ್ನೆಲೆ ಕರ್ತವ್ಯನಿರತ 108 ವಾಹನ ಚಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.
ರಾಣೆಬೆನ್ನೂರು: ಉಸಿರಾಟದ ಸಮಸ್ಯೆಯಿಂದ ಕೊರೊನಾ ವಾರಿಯರ್ ಸಾವು - ಹಾವೇರಿ ಕೊರೊನಾ ವಾರಿಯರ್ ಮೃತ ಪ್ರಕರಣ
108 ವಾಹನ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಚಿದಾನಂದಮೂರ್ತಿ (45) ಎಂಬುವರಿಗೆ ಉಸಿರಾಟದ ಸಮಸ್ಯೆ ಎದುರಾಗಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
ರಾಣೆಬೆನ್ನೂರು: ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಕೊರೊನಾ ವಾರಿಯರ್
ಚಿದಾನಂದಮೂರ್ತಿ (45) ಮೃತಪಟ್ಟ ಕೊರೊನಾ ವಾರಿಯರ್. ಇವರು 108 ವಾಹನ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದು, ನಿನ್ನೆ ಸಂಜೆ ಕರ್ತವ್ಯನಿರತರಾಗಿದ್ದ ವೇಳೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.