ಹಾವೇರಿ :ಜಿಲ್ಲೆಯ ಸವಣೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡು ಮೂರು ದಿನಗಳು ಕಳೆದಿವೆ. ಮುಂಬೈಯಿಂದ ಸವಣೂರಿಗೆ ಆಗಮಿಸಿದ್ದ ಮೂವರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಮಗನಿಗೆ ನೆಗೆಟಿವ್ ವರದಿ ಬಂದಿದೆ.
ಅಲ್ಲದೆ ಮೊದಲ ಸೋಂಕಿತನ ಪ್ರಥಮ ಸಂಪರ್ಕದಲ್ಲಿದ್ದ 21 ಶಂಕಿತರ ವರದಿ ನೆಗಟಿವ್ ಬಂದಿರುವುದು ಸ್ವಲ್ಪ ನೆಮ್ಮದಿ ಮೂಡಿಸಿದೆ. ಆದರೂ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.