ಕರ್ನಾಟಕ

karnataka

ETV Bharat / state

ಶಿಗ್ಗಾಂವಿ ಪಟ್ಟಣದ ಪಿಗ್ಮಿ ಕಲೆಕ್ಟರ್​ಗೆ ಕೊರೊನಾ...ಸಾರ್ವಜನಿಕರಲ್ಲಿ ಆತಂಕ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ 37 ವರ್ಷದ ಪಿಗ್ಮಿ ಕಲೆಕ್ಟರ್​ಗೆ (ಪಿ-9412) ಸೋಂಕು ದೃಢಪಟ್ಟಿದ್ದು, ಪಿಗ್ಮಿ ಕಲೆಕ್ಟರ್ ಕೊರೊನಾ ಬಂದಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Corona to the Pygmy Collector of the Shiggavi town
ಶಿಗ್ಗಾಂವಿ ಪಟ್ಟಣದ ಪಿಗ್ಮಿ ಕಲೆಕ್ಟರ್​ಗೆ ಕೊರೊನಾ...ಸಾರ್ವಜನಿಕರಲ್ಲಿ ಆತಂಕ

By

Published : Jun 25, 2020, 12:01 AM IST

ಹಾವೇರಿ:ಜಿಲ್ಲೆಯ ಶಿಗ್ಗಾಂವಿ ಪಟ್ಟಣದ 37 ವರ್ಷದ ಪಿಗ್ಮಿ ಕಲೆಕ್ಟರ್​ಗೆ (ಪಿ-9412) ಸೋಂಕು ದೃಢಪಟ್ಟಿದೆ. ಪಿ- 8292ರ ಸಂಪರ್ಕದಿಂದ ಪಿಗ್ಮಿ ಕಲೆಕ್ಟರ್​ಗೆ ಸೋಂಕು ತಗುಲಿದೆ.

ಪಟ್ಟಣದಲ್ಲಿ ಪಿಗ್ಮಿ ಕಲೆಕ್ಟ್ ಮಾಡಿ ಕಿತ್ತೂರು ರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಣ ಜಮಾ ಮಾಡುತ್ತಿದ್ದರು. ಸೋಂಕಿತ ಪಿಗ್ಮಿ ಕಲೆಕ್ಷನ್ ಜೊತೆಗೆ ಹೋಲ್​ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡುತ್ತಿದ್ದ. ಪಿಗ್ಮಿ ಕಲೆಕ್ಟರ್ ಕೊರೊನಾ ಬಂದಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಯಾಕೆಂದರೆ ಸೋಂಕಿತನ ಟ್ರಾವೆಲ್ ಹಿಸ್ಟರಿ ತೆಗೆದಾಗ ಈತ ಓಡಾಡದ ಜಾಗವೇ ಇಲ್ಲ ಎಂಬಂತಾಗಿದೆ. ಪಿಗ್ಮಿ ಕಲೆಕ್ಟರ್ ಮಾತ್ರವಲ್ಲದೆ, ಈವರೆಗೆ ಶಿಗ್ಗಾಂವಿ ತಾಲೂಕು ಒಂದರಲ್ಲೇ ಇಪ್ಪತ್ತಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿವೆ. ಶಿಗ್ಗಾಂವಿ ಪಟ್ಟಣದಲ್ಲೇ ಹದಿನೈದು ಪ್ರಕಣಗಳಿವೆ. ಇದರಿಂದ ಬೆಚ್ಚಿ ಬಿದ್ದಿರೋ ಶಿಗ್ಗಾಂವಿ ಪಟ್ಟಣದ ಜನರು, ಪಟ್ಟಣವನ್ನ ಹದಿನೈದು ದಿನಗಳ ಕಾಲ ಲಾಕ್​ಡೌನ್ ಮಾಡುವಂತೆ ತಹಶೀಲ್ದಾರ್​ಗೆ ಮನವಿ ಸಲ್ಲಿಸಿದ್ದಾರೆ.

ನಗರದ ಹೋಟೆಲ್ ಮಾಲೀಕರಂತೂ ಜೂನ್ 30 ರವರೆಗೆ ಸ್ವಯಂಚಾಲಿತವಾಗಿ ಹೋಟೆಲ್ ಬಂದ್ ಮಾಡಿದ್ದಾರೆ. ದಿನಸಿ ಅಂಗಡಿಗಳ ಮಾಲೀಕರು ಸಹ ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಅಂಗಡಿ ಓಪನ್ ಮಾಡ್ತಿದ್ದಾರೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಮನವಿ ಸ್ವೀಕರಿಸಿರುವ ಶಿಗ್ಗಾಂವಿ ತಹಶೀಲ್ದಾರ್, ​ಲಾಕ್​ಡೌನ್ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

ABOUT THE AUTHOR

...view details