ಕರ್ನಾಟಕ

karnataka

ETV Bharat / state

ಹಾವೇರಿಯ ಉಪನೋಂದಣಿ ಕಚೇರಿ‌‌ ಸಿಬ್ಬಂದಿಗೆ ಕೊರೊನಾ - Haveri corona pudates

ಈ ಮಧ್ಯ ಕಚೇರಿಗೆ ಬೇರೆ ಗೇಟ್‌ನಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ. ಪಕ್ಕದಲ್ಲಿರುವ ಪಾನ್, ಬೀಡಾ ಅಂಗಡಿ ಸೇರಿ ಹೋಟೆಲ್ ಸಹ ಆರಂಭ ಮಾಡಿರುವುದರಿಂದ ಸ್ಥಳೀಯರ ಆತಂಕ..

Haveri
Haveri

By

Published : Jul 22, 2020, 4:48 PM IST

ಹಾವೇರಿ :ಉಪನೋಂದಣಿ ಕಚೇರಿಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

ಸಿಬ್ಬಂದಿಗೆ ಸೋಂಕು ದೃಢವಾದ ಹಿನ್ನೆಲೆ ಪಟ್ಟಣದ ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಕಚೇರಿ ಮತ್ತು ಉಪವಿಭಾಗಾಧಿಕಾರಿ ಕಚೇರಿಯಿರುವ ಮಿನಿವಿಧಾನಸೌಧ ಬಂದ್ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಅಲ್ಲದೆ ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ಮಧ್ಯ ಕಚೇರಿಗೆ ಬೇರೆ ಗೇಟ್‌ನಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ. ಪಕ್ಕದಲ್ಲಿರುವ ಪಾನ್, ಬೀಡಾ ಅಂಗಡಿ ಸೇರಿ ಹೋಟೆಲ್ ಸಹ ಆರಂಭಮಾಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details