ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವರಿಗೆ ಹಾವೇರಿ ನಗರಸಭೆಯಿಂದ ಕೊರೊನಾ ಟೆಸ್ಟ್ - ಹಾವೇರಿ ಜಿಲ್ಲೆ ಸುದ್ದಿ

ನಗರದ ಜೆಪಿ ವೃತ್ತದಲ್ಲಿ ತಪಾಸಣಾ ಕೇಂದ್ರ ತೆರೆದ ನಗರಸಭೆ ಸಾರ್ವಜನಿಕರಿಗೆ ಮಾಸ್ಕ್ ಕುರಿತಂತೆ ಜಾಗೃತಿ ಮೂಡಿಸಿತು. ಮಾಸ್ಕ್ ಧರಿಸದೇ ನಿರ್ಲಕ್ಷ್ಯದಿಂದ ಓಡಾಡುವ ನಾಗರಿಕರನ್ನ ಕರೆದು ಆಂಟಿಜನ್ ಟೆಸ್ಟ್ ಮಾಡಿಸಿತು.

corona-test-by-haveri-municipality-for-public-without-mask
ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವರಿಗೆ ಹಾವೇರಿ ನಗರಸಭೆಯಿಂದ ಕೊರೊನಾ ಪರೀಕ್ಷೆ

By

Published : Oct 3, 2020, 5:54 PM IST

ಹಾವೇರಿ: ನಗರಸಭೆ ಶನಿವಾರ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಮನ ಸೆಳೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವ ವಾಹನ ಸವಾರರು, ಪಾದಚಾರಿಗಳಿಗೆ ಕೊರೊನಾ ಪರೀಕ್ಷೆ ನಡೆಸಿತು.

ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವರಿಗೆ ಹಾವೇರಿ ನಗರಸಭೆಯಿಂದ ಕೊರೊನಾ ಪರೀಕ್ಷೆ

ಮಾಸ್ಕ್ ಧರಿಸದೇ ಓಡಾಡುವ ಜನರಿಗಾಗಿ ಕೊರೊನಾ ತಪಾಸಣಾ ಕೇಂದ್ರ ತೆರೆದು ಪೊಲೀಸ್ ಇಲಾಖೆ ಸಹಾಯದಿಂದ ಕೊರೊನಾ ಪರೀಕ್ಷೆ ನಡೆಸಿತು. ನಗರದ ಜೆಪಿ ವೃತ್ತದಲ್ಲಿ ತಪಾಸಣಾ ಕೇಂದ್ರ ತೆರೆದ ನಗರಸಭೆ ಸಾರ್ವಜನಿಕರಿಗೆ ಮಾಸ್ಕ್ ಕುರಿತಂತೆ ಜಾಗೃತಿ ಮೂಡಿಸಿತು. ಮಾಸ್ಕ್ ಧರಿಸದೇ ನಿರ್ಲಕ್ಷ್ಯದಿಂದ ಓಡಾಡುವ ನಾಗರಿಕರನ್ನ ಕರೆದು ಆಂಟಿಜನ್ ಟೆಸ್ಟ್ ಮಾಡಿಸಿತು.

ನಗರಕ್ಕೆ ಮಾಸ್ಕ್ ಧರಿಸದೇ ಬಂದಿದ್ದ ಗ್ರಾಮಸ್ಥರು, ನಗರವಾಸಿಗಳು ಕೆಲಕಾಲ ತಬ್ಬಿಬ್ಬುಗೊಂಡರು. ಮಾಸ್ಕ್ ಧರಿಸದೇ ಬಂದಿದಕ್ಕೆ ಪಶ್ಚಾತಾಪಪಟ್ಟು ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದ ದೃಶ್ಯ ಕಂಡು ಬಂತು.

ABOUT THE AUTHOR

...view details