ಹಾವೇರಿ: ಸವಣೂರು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಹಾವೇರಿಗೂ ವಕ್ಕರಿಸಿದ ಸೋಂಕು: 32 ವರ್ಷದ ವ್ಯಕ್ತಿಯ ವರದಿ ಪಾಸಿಟಿವ್ - corona positivie case in haveri
ಇಲ್ಲಿವರೆಗೆ ಯಾವುದೇ ಭಯವಿಲ್ಲದೆ ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಇಂದು ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪತ್ತೆ
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಏಪ್ರಿಲ್ 28 ರಂದು ಮುಂಬೈನಿಂದ ಲಾರಿಯಲ್ಲಿ ಸವಣೂರಿಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮುಂಬೈನಿಂದ ಬಂದಾತ ಮನೆಯಲ್ಲಿಯೇ ಹೋಂ ಕ್ವಾರಂಟೈನ್ನಲ್ಲಿದ್ದ. ಏಪ್ರಿಲ್ 29 ರಂದು ಆರೋಗ್ಯ ಇಲಾಖೆ ಈತನ ಗಂಟಲ ದ್ರವ ಸ್ಯಾಂಪಲ್ಸ್ ಲ್ಯಾಬ್‌ಗೆ ಕಳುಹಿಸಿತ್ತು. ಈತನೊಂದಿಗೆ ಬಂದಿದ್ದ ಇನ್ನೂ ಇಬ್ಬರ ಥ್ರೋಟ್ ಸ್ವ್ಯಾಬ್ ಸ್ಯಾಂಪಲ್ಸ್ ಕೂಡ ಲ್ಯಾಬ್ ಟೆಸ್ಟ್ಗೆ ಕಳುಹಿ ಸಲಾಗಿತ್ತು.
ಇದೀಗ ಒಬ್ಬನಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನಿಬ್ಬರ ದ್ವಿತೀಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.