ಕರ್ನಾಟಕ

karnataka

ETV Bharat / state

ಹಾವೇರಿ ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್​.. ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆ - haveri corona case

ಕಾನ್​ಸ್ಟೇಬಲ್ ಬೆಂಗಳೂರಿನ ಸಶಸ್ತ್ರ ಮೀಸಲು ಪಡೆಯ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ..

By

Published : Jun 26, 2020, 9:10 PM IST

ಹಾವೇರಿ :ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಶಿಗ್ಗಾಂವಿ ಪಟ್ಟಣದ 40 ವರ್ಷದ ಮಹಿಳೆ ಹಾಗೂ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ 27 ವರ್ಷದ ಕಾನ್​ಸ್ಟೇಬಲ್‌ಗೆ ಸೋಂಕು ತಗುಲಿದೆ. ಕಾನ್​ಸ್ಟೇಬಲ್ ಬೆಂಗಳೂರಿನ ಸಶಸ್ತ್ರ ಮೀಸಲು ಪಡೆಯ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಇದರಲ್ಲಿ 24 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, 22 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details