ಕರ್ನಾಟಕ

karnataka

ETV Bharat / state

ಹಾವೇರಿಯ ಮಾವಿನ ಹಣ್ಣಿನ ವ್ಯಾಪಾರಿಗೆ ತಗುಲಿದ ಕೊರೊನಾ - ಹಾವೇರಿ ಕೊರೊನಾ ಸುದ್ದಿ

ಏಪ್ರಿಲ್​ ತಿಂಗಳಲ್ಲಿ ಮೂರು ಬಾರಿ ಮುಂಬೈಗೆ ಹೋಗಿ ಬಂದಿದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಮಾವಿನ ಹಣ್ಣಿನ ವ್ಯಾಪಾರಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Corona Positive for Mango Fruit sellar in haveri
ಹಾವೇರಿಯ ಮಾವಿನ ಹಣ್ಣಿನ ವ್ಯಾಪಾರಿಗೆ ಕೊರೊನಾ ಪಾಸಿಟಿವ್​

By

Published : May 11, 2020, 1:32 PM IST

ಹಾವೇರಿ:ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ 26 ವರ್ಷದ ಮಾವಿನ ಹಣ್ಣಿನ ವ್ಯಾಪಾರಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಈತ ಏಪ್ರಿಲ್​ ತಿಂಗಳಲ್ಲಿ ಮೂರು ಬಾರಿ ಮುಂಬೈಗೆ ಹೋಗಿ ಬಂದಿದ್ದು, ಆರೋಗ್ಯ ಇಲಾಖೆ ಈ ವ್ಯಾಪಾರಿಯನ್ನು ಮೇ 5ರಂದು ಕ್ವಾರಂಟೈನ್ ಮಾಡಿತ್ತು. ಇದೀಗ ಆತನ ಪರೀಕ್ಷಾ ವರದಿ ಕೈ ಸೇರಿದೆ.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದ್ದು, ತಹಶೀಲ್ದಾರ್​ ಪ್ರಕಾಶ ಕುದರಿ, ಡಿವೈಎಸ್ಪಿ ಕಲ್ಲೇಶಪ್ಪ ಭೇಟಿ ನೀಡಿ ಗ್ರಾಮದಿಂದ ಯಾರೂ ಹೊರ ಹೋಗದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಪತ್ತೆಯಾದ ಮೂರನೇ ಸೋಂಕು ಪ್ರಕರಣ ಇದಾಗಿದೆ.

ABOUT THE AUTHOR

...view details